ದಾವಣಗೆರೆ: ಸಮಗಾರ ಹರಳಯ್ಯ ಸಮಾಜದ ಏಳಿಗೆಗಾಗಿ ಕೈಲಾದಷ್ಟು ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ನುಡಿದರು.

ನಗರದ ಮಹಾತ್ಮ ಬಸವ ಬುದ್ಧ ಭೀಮಾ ನಗರದಲ್ಲಿ ಭಾನುವಾರ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ನಗರ ಪಾಲಿಕೆಯ ಶೇ 22.75ರ ಅನುದಾನದ ಅಡಿಯಲ್ಲಿ ನಿರ್ಮಿಸಲಾದ ಲಿಡ್ಕರ್ ಕುಟೀರಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಅತ್ಯಂತ ಹಿಂದುಳಿದ ಸಮಾಜಗಳ ಏಳ್ಗೆಗೆ ಸರ್ಕಾರವು ಶ್ರಮಿಸುತ್ತಿದೆ. ಸಮಗಾರ ಸಮಾಜಕ್ಕೆ ಕಲ್ಯಾಣ ಮಂಟಪದ ಅವಶ್ಯಕತೆ ಇದ್ದು, ಅದನ್ನು ಆದಷ್ಟು ಬೇಗ ನೆರವೇರಿಸಿ ಕೊಡುವುದಾಗಿ ತಿಳಿಸಿದರು.

ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಸಮಗಾರ ಹರಳಯ್ಯ ತನ್ನ ತೊಡೆ ಚರ್ಮದಿಂದಲೇ ಪಾದರಕ್ಷೆ ತಯಾರಿಸಿ ಬಸವಣ್ಣ ಅವರಿಗೆ ಅರ್ಪಿಸಿದ ಮಹಾನ್ ವ್ಯಕ್ತಿ. ಸಮಗಾರರು ಸ್ವಂತ ಉದ್ಯೋಗಿಗಳಾಗಿ ಸಮಾಜದಲ್ಲಿ ಉತ್ತಮವಾಗಿ ಜೀವನ ನಿರ್ವಹಿಸಬೇಕು ಎಂದರು.

ನ್ಯಾ.ಸದಾಶಿವ ಆಯೋಗದ ವರದಿಯಲ್ಲಿ ಸಮಗಾರ ಸಮಾಜಕ್ಕೆ ಯಾವುದೇ ಒಳಮೀಸಲಾತಿಯನ್ನು ನೀಡಲಾಗಿಲ್ಲ ಎಂಬ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಫಕ್ಕಿರಪ್ಪ ಬೆಟಗೇರಿ, ಕೆ. ಬಾಬುಮಾನೆ, ಸುರೇಶ್ ಉಳ್ಳಿಕಾಶಿ, ರಾಜಶೇಖರ್ ತೆಲಗಾವಿ ಅವರನ್ನು ಸನ್ಮಾನಿಸಲಾಯಿತು.

ಧಾರವಾಡದ ಮಾರ್ಕಂಡೆಯ ದೊಡಮನಿ, ಲಿಡ್ಕರ್ ನಿರ್ದೇಶಕ ಎನ್. ರಾಜಶೇಖರ್, ಉಪ ಮೇಯರ್ ಮಹೇಶ್ ರಾಯಚೂರು, ದಶರಥ ಹೆಗ್ಗೇಳಿಕರ್, ಜಗದೀಶ್ ಬೆಟಗೇರಿ, ಭೀಮಣ್ಣ ತೇರದಾಳ, ಯಲ್ಲಪ್ಪ ಬೆಂಡಿಗೇರಿ, ಡಾ.ಮೋಹನ ಉಳ್ಳಿಕಾಶಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.