ಹುಬ್ಬಳ್ಳಿ: `ವ್ಯಕ್ತಿಯೊಬ್ಬನ ಯಾವುದೇ ಕಾರ್ಯ ಸಾಧನೆಗೆ ಸ್ಫೂರ್ತಿ ಹಾಗೂ ಪ್ರೇರಣೆ ಬಲು ಮುಖ್ಯವಾದ ಅಂಶಗಳಾಗಿವೆ~ ಎಂದು `ಥ್ರೀ ಈಡಿಯಟ್ಸ್~ ಸಿನಿಮಾದ ಚಿತ್ರಕಥೆಯನ್ನೂ ಬರೆದಿರುವ ಖ್ಯಾತ ಮ್ಯಾನೇಜ್ಮೆಂಟ್ ಗುರು, ಲೇಖಕ ಚೇತನ ಭಗತ್ ಅಭಿಪ್ರಾಯಪಟ್ಟರು.

ಸರ್ವತ್ರಾ ಸಂಸ್ಥೆಯ ವತಿಯಿಂದ `ಎಂಬಿಎ ಪದವಿ ಅಧ್ಯಯನ ಹಾಗೂ ಅವಕಾಶಗಳು~ ವಿಷಯವಾಗಿ ಭಾನುವಾರ ಏರ್ಪಡಿಸಿದ್ದ ಕಾನ್ಕ್ಲೇವ್-2012 ಸಮಾವೇಶದಲ್ಲಿ ಅವರು ಮಾತನಾಡಿದರು. `ಲಕ್ಷ್ಯದಲ್ಲಿ ಇಟ್ಟುಕೊಂಡ ಗುರಿ ಸುಲಭವಾಗಿ ಈಡೇರದಿದ್ದರೆ ಖಿನ್ನತೆ ಸಾಮಾನ್ಯ. ಆಗ ಆ ಗುರಿಯಿಂದ ಹಿಂದೆ ಸರಿದರೆ ಸಾಧಕನಿಗೇ ಹಾನಿ. ಅದರ ಬದಲು ಮತ್ತೆ ಮತ್ತೆ ಪ್ರಯತ್ನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ~ ಎಂದು ಹುರಿದುಂಬಿಸಿದರು.

`ನನ್ನ ಮೊದಲ ಕೃತಿಯನ್ನು ಬರೆದಾಗ ಪ್ರಕಾಶಕರ ಮನೆ ಬಾಗಿಲಿಗೆ ಎಡತಾಕಿದೆ. ಒಂಬತ್ತು ಪ್ರಕಾಶಕರು ನನ್ನ ಕೃತಿ ಮುದ್ರಣಕ್ಕೆ ನಿರಾಕರಿಸಿದ್ದಲ್ಲದೆ ಗೇಲಿ ಮಾಡಿ ಕಳುಹಿಸಿದರು. ಇದರಿಂದ ಮನನೊಂದು ನಾನು ಸುಮ್ಮನಾಗದೆ ಹತ್ತನೇ ಪ್ರಕಾಶಕರ ಬಳಿಗೆ ಹೋದೆ. ಮುಂದೇನಾಯಿತು ಎಂಬುದು ನಿಮಗೆಲ್ಲ ಗೊತ್ತಿದೆ~ ಎಂದು ಅವರು ಮೆಲುಕು ಹಾಕಿದರು.

`ಕನಸಿಗೂ ಗುರಿಗೂ ಬಹಳ ವ್ಯತ್ಯಾಸವಿದೆ. ಕನಸೆಂಬುದು ಮೋಡ ಇದ್ದಂತೆ. ಒಮ್ಮೆ ಕಾಣಿಸಿಕೊಳ್ಳುತ್ತದೆ. ಇನ್ನೊಮ್ಮೆ ಮಾಯವಾಗುತ್ತದೆ. ಮೋಡ ಲಂಗರು ಹಾಕಿ ನಿಂತರೂ ಮಳೆ ಸುರಿಸದೆ ಮುಂದೆ ಹೋಗುತ್ತದೆ. ಗುರಿ ಹಾಗಲ್ಲ. ಅದಕ್ಕೊಂದು ನಿಖರತೆ ಇದೆ. ಇಂತಿಷ್ಟೇ ಕಾಲದಲ್ಲಿ ಸಾಧಿಸಬೇಕೆಂಬ ಸಮಯ ಮಿತಿಯೂ ಇದೆ. ಆದ್ದರಿಂದ ಕನಸು ಕಾಣದೆ ಗುರಿ ಇಟ್ಟುಕೊಂಡು ಮುನ್ನುಗ್ಗಬೇಕು~ ಎಂದು ಅವರು ಸಲಹೆ ನೀಡಿದರು.

`ಯಶಸ್ಸಿಗೆ ಯಾವುದೇ ಅಡ್ಡಮಾರ್ಗ ಇಲ್ಲ. ಯಶಸ್ಸಿನ ಮಟ್ಟವನ್ನು ಹೀಗೇ ಎಂದು ನಿರ್ಧರಿಸುವಂತಿಲ್ಲ. ಅವರವರ ಭಾವಕ್ಕೆ ತಕ್ಕಂತೆ ಅದನ್ನು ಅರ್ಥೈಸಬಹುದು. ವ್ಯಕ್ತಿಯೊಬ್ಬ ಬೊಜ್ಜು ಖರೀದಿಸಿದ್ದು ಉಳಿದವರಿಗೆ ವ್ಯರ್ಥವಾಗಿ ಕಾಣಬಹುದು. ಆದರೆ, ಆ ಸಾಧಕ ವ್ಯಕ್ತಿಗೆ ಅದೇ ದೊಡ್ಡ ಯಶಸ್ಸು~ ಎಂದು ಅವರು ವ್ಯಾಖ್ಯಾನಿಸಿದರು.

`ದೊಡ್ಡ ಸಾಧನೆಗಳು ಸಣ್ಣ, ಸಣ್ಣ ಕೆಲಸಗಳಿಂದಲೇ ಸಾಧ್ಯವಾಗುವುದು~ ಎಂದ ಅವರು, `ಇಡಿಯಾಗಿ ಕೆಲಸಕ್ಕೆ ಕೈಹಾಕಿ ತಲೆ ಕೆಡಿಸಿಕೊಳ್ಳದೆ, ಹಂತ-ಹಂತವಾಗಿ ಕಾರ್ಯ ನಿರ್ವಹಿಸಬೇಕು~ ಎಂದು ಕಿವಿಮಾತು ಹೇಳಿದರು.
ಬಳಿಕ ನಡೆದ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ನಾನು ರಾಜಕೀಯಕ್ಕೆ ಸೇರುವುದಿಲ್ಲ. ಇದರಿಂದ ಪಕ್ಷದ ಅಣತಿಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸ್ವಾತಂತ್ರ್ಯ ಕಳೆದುಕೊಂಡು ರಾಜಕೀಯದಲ್ಲಿ ಜೀವನ ಸಾಗಿಸುವುದು ನನಗೆ ಬೇಕಿಲ್ಲ~ ಎಂದು ತಿಳಿಸಿದರು. `ಭ್ರಷ್ಟಾಚಾರಕ್ಕೆ ಜನಾಂದೋಲನದಲ್ಲೇ ಪರಿಹಾರ ಇದೆ~ ಎಂದೂ ಅವರು ಅಭಿಪ್ರಾಯಪಟ್ಟರು.

ಸಂಸದ ಪ್ರಹ್ಲಾದ ಜೋಶಿ ಸಮಾವೇಶ ಉದ್ಘಾಟಿಸಿದರು. ಸಂಸ್ಥೆಯ ಮುಖ್ಯಸ್ಥ ಮಂಜುನಾಥ ಸುರೇಬಾನ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.