ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಪ್ಟೋ ಕರೆನ್ಸಿ ಖರೀದಿಸಿದರೆ ಲಾಭ ಎಂದು ನಂಬಿಸಿ ₹1.04 ಕೋಟಿ ವಂಚನೆ

Published 26 ಜೂನ್ 2024, 16:21 IST
Last Updated 26 ಜೂನ್ 2024, 16:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕ್ರಿಪ್ಟೋ ಕರೆನ್ಸಿ ಖರೀದಿಸಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಗರದ ಉದ್ಯಮಿ ಮತ್ತು ಅವರ ಇಬ್ಬರು ಸ್ನೇಹಿತರಿಗೆ ವೆಬ್‌ ಲಿಂಕ್‌ ಕಳುಹಿಸಿದ ವ್ಯಕ್ತಿ, ₹1.04 ಕೋಟಿ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಉದ್ಯಮಿ ಶಿವಾನಂದ ಪಾವುಸ್ಕರ್ ಮತ್ತು ಅವರ ಸ್ನೇಹಿತರಾದ ಪ್ರವೀಣ ಕುಲಕರ್ಣಿ, ಸುಜೀತ್ ಕಲಬುರಗಿ ವಂಚನೆಗೆ ಒಳಗಾದವರು. ಫೇಸ್‌ಬುಕ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಕುರಿತು ಜಾಹೀರಾಜು ನೋಡಿ, ಅಲ್ಲಿನ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ದರು. ಛಾಯಾಸಿಂಗ್ ಹೆಸರಿನ ವ್ಯಕ್ತಿ ಪರಿಚಯವಾಗಿದ್ದ. ಬಳಿಕ ಅವನು ಕೆಲವು ವೆಬ್‌ಸೈಟ್‌ಗಳ ಲಿಂಕ್ ಕಳುಹಿಸಿ, ಅದರಲ್ಲಿರುವ ವಿಯಾಕಾ ಕ್ರಿಪ್ಟೋ ಆ್ಯಪ್‌ ಅಳವಡಿಸಿಕೊಳ್ಳಲು ಸೂಚಿಸಿದ. ಅದನ್ನು ನಂಬಿದ ಮೂವರು ಮೊಬೈಲ್‌ಗಳಿಗೆ ಆ್ಯಪ್‌ ಅಳವಡಿಸಿಕೊಂಡರು. ಆಗ ಶಿವಾನಂದ ಖಾತೆಯಿಂದ ₹68.99 ಲಕ್ಷ, ಸುಜಿತ್ ಖಾತೆಯಿಂದ ₹14.85 ಲಕ್ಷ ಹಾಗೂ ಪ್ರವೀಣ ಖಾತೆಯಿಂದ ₹21.05 ಲಕ್ಷ ಬೇರೊಂದು ಖಾತೆಗೆ ವರ್ಗವಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT