ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿ ನಿಮಿಷಕ್ಕೆ 17 ಮಂದಿಗೆ ಕ್ಯಾನ್ಸರ್‌’

Last Updated 3 ಫೆಬ್ರುವರಿ 2020, 15:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ ಹದಿನೇಳು ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಬದಲಾದ ಜೀವನ ಶೈಲಿಯಿಂದಾಗಿ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ’ ಎಂದು ಎಚ್‌ಸಿಜಿ ಆಸ್ಪತ್ರೆಯ ಡಾ. ಪ್ರಸಾದ ಗುಣಾರೆ ಹೇಳಿದರು.

ಎಚ್‌ಸಿಸಿ–ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಹಾಗೂ ನೈರುತ್ಯ ರೈಲ್ವೆ ಸಹಯೋಗದಲ್ಲಿ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕ್ಯಾನ್ಸರ್ ಅರಿವಿನ ಕೊರತೆಯಿಂದಾಗಿ ಅನೇಕ ಮಂದಿ ತಮಗೆ ರೋಗಲಕ್ಷಣವಿದ್ದರೂ ಗೊತ್ತಿಲ್ಲದಂತೆ ಇರುತ್ತಾರೆ’ ಎಂದರು.

‘ಕ್ಯಾನ್ಸರ್ ಗುಣಮುಖವಾಗಬಲ್ಲ ಕಾಯಿಲೆ. ಆರಂಭಿಕ ಹಂತದಲ್ಲೇ ಅದನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಪಥ್ಯಾಹಾರ ಹಾಗೂ ಚಟಗಳಿಂದ ದೂರವಿದ್ದರೆ ಸುಲಭವಾಗಿ ಕ್ಯಾನ್ಸರ್ ಜಯಿಸಬಹುದು. ಈ ನಿಟ್ಟಿನಲ್ಲಿ ಫೆ. 4ರಂದು ವಿಶ್ವದಾದ್ಯಂತ ಕಾನ್ಸರ್ ದಿನ ಆಚರಿಸಲಾಗುತ್ತದೆ. ಅದರ ಪ್ರಯುಕ್ತ ಇಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಮಾತನಾಡಿ, ‘ಕ್ಯಾನ್ಸರ್ ಬಂದ ಮೇಲೆ ಪರದಾಡುವುದಕ್ಕಿಂತ, ಬರುವುದಕ್ಕೂ ಮುಂಚೆಯೇ ಅದರ ಬಗ್ಗೆ ಜಾಗೃತರಾಗಬೇಕು’ ಎಂದರು.

ಎಚ್‌ಸಿಜಿ ಆಸ್ಪತ್ರೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಾ. ಜೈಕಿಶನ್ ಅಜಿತಾಲ, ವೈದ್ಯರಾದ ಡಾ. ಸಂಜಯ್ ಮಿಶ್ರಾ, ನೈರುತ್ಯ ರೈಲ್ವೆಯ ಎಜಿಎಂ ಪಿ.ಕೆ. ಮಿಶ್ರಾ, ಡಿಆರ್‌ಎಂ ಅರವಿಂದ ಮಲ್ಕಾಡೆ, ಮೆಡಿಕಲ್ ಅಧಿಕಾರಿ ಡಾ. ರಾಮಚಂದ್ರ ಹಾಗೂ ಸ್ವರ್ಣ ಸಮೂಹ ಕಂಪನಿಗಳ ಮುಖ್ಯಸ್ಥ ವಿ.ಎಸ್.ವಿ. ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT