ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿದ ವ್ಯಕ್ತಿಗೆ ₹5 ಸಾವಿರ ದಂಡ
ಹುಬ್ಬಳ್ಳಿ: ಗೋಕುಲ ರಸ್ತೆಯ ಗೋಕುಲ ಕ್ರಾಸ್ ರಸ್ತೆ ಬದಿ ಮಂಗಳವಾರ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದ ಶಿವಾಜಿ ಎಂಬುವರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ₹5 ಸಾವಿರ ದಂಡ ವಿಧಿಸಿದ್ದಾರೆ.
ಶಿವಾಜಿ ಅವರು ಲಾರಿಯಲ್ಲಿ ತ್ಯಾಜ್ಯ ತಂದು ಕಾನೂನುಬಾಹಿರವಾಗಿ ರಸ್ತೆ ಬದಿ ಸುರಿಯುತ್ತಿದ್ದರು. ಆಗ ಸ್ಥಳಕ್ಕೆ ಬಂದ ಪಾಲಿಕೆಯ ವಲಯ ಕಚೇರಿ –7ರ ಪರಿಸರ ಎಂಜಿನಿಯರ್ ಜ್ಯೋತಿ ಬಿ.ಎಚ್, ಆರೋಗ್ಯ ನಿರೀಕ್ಷಕಿ ಯಲ್ಲಮ್ಮ ಚಳಗೇರಿ ಅವರು ಶಿವಾಜಿ ಅವರಿಗೆ ದಂಡ ವಿಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.