ಶನಿವಾರ, ಸೆಪ್ಟೆಂಬರ್ 18, 2021
27 °C

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಂಚೆ ವಲಯಕ್ಕೆ 7 ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: 2021ರ ಜನವರಿ 1ರಿಂದ ಮಾರ್ಚ್‌ ತನಕ ರಾಷ್ಟ್ರದಾದ್ಯಂತ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ ‘ಹೆಚ್ಚಿನ ವಾಗ್ದಾನ’ ಹೆಸರಿನಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯ ಕರ್ನಾಟಕ ಅಂಚೆ ವಲಯ ಮಟ್ಟದ ವಿಜೇತರಿಗೆ ಬುಧವಾರ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಗಳಿಸಿದ ಉತ್ತರ ಕರ್ನಾಟಕ ಅಂಚೆ ವಲಯ ದೊಡ್ಡ ವಲಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕರ್ನಾಟಕ ಅಂಚೆ ವಲಯ ಈ ಸಾಧನೆಗೆ ನೆರವಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಬೀದರ್ ಅಂಚೆ ವಿಭಾಗ 5ನೇ ಉತ್ತಮ ಅಂಚೆ ವಿಭಾಗವಾಗಿ ಗುರುತಿಸಿಕೊಂಡಿದೆ. ಭಾರತದ ಉತ್ತಮ 50 ಶಾಖೆಗಳಲ್ಲಿ ಉತ್ತರ ಕರ್ನಾಟಕ ಅಂಚೆ ವಲಯ 7 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಕರ್ನಾಟಕ ಆಂಚೆ ವಲಯದ ಮುಖ್ಯಸ್ಥೆ ಶಾರದಾ ಸಂಪತ್ ರಾಜ್ಯ ಮಟ್ಟದ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಗದಗ ವಿಭಾಗದ ನಾಗಮ್ಮ ಮಂತಾ ರಾಜ್ಯ ಮಟ್ಟದಲ್ಲಿ‘ಬೆಸ್ಟ್‌ ಪರ್ಫಾಮಿಂಗ್‌ ಆ್ಯಂಡ್‌ ಯೂಸರ್‌ ಮತ್ತು ಒಟ್ಟು ವಹಿವಾಟು ಹಾಗೂ ಒಟ್ಟು ಹಣ ವರ್ಗಾವಣೆ’ ಎಂಬ ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಬೆಳಗಾವಿ ಅಂಚೆ ವಿಭಾಗವು ರಾಜ್ಯಮಟ್ಟದಲ್ಲಿ ಉತ್ತಮ ಅಂಚೆ ವಿಭಾಗ ಪ್ರಶಸ್ತಿ ಗಳಿಸಿತು.

ಧಾರವಾಡದ ಪೋಸ್ಟ್ ಮಾಸ್ಟರ್ ಜನರಲ್ ಡಾ. ವಿನೋದ್ ಕುಮಾರ ಮಾತನಾಡಿ ‘ಎಲ್ಲರೂ ಒಂದಾಗಿ ಕೆಲಸ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಯಿತು’ ಎಂದರು. ಜಿ.ಕೆ. ಗೋವಿಂದರಾಜ್‌, ಅಂಚೆ ನಿರ್ದೇಶಕ ಎಂ.ಬಿ. ಘಜ್ಭಿಯೆ, ಡಾ. ಪರಿಮಳ ಪಂಚಮುಖಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು