ಬುಧವಾರ, ಜೂನ್ 23, 2021
30 °C
ಬಿಜೆಪಿ ಕಚೇರಿಯಲ್ಲಿ ಕರಸೇವಾ ಕಾರ್ಯಕರ್ತ ಗುರುಸಿದ್ದಪ್ಪ ಶೆಲ್ಲಿಕೇರಿ ಧ್ವಜಾರೋಹಣ

ಹಿಂಸೆ ರಹಿತ ರಾಷ್ಟ್ರ ನಿರ್ಮಾಣಕ್ಕೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಭಾರತವನ್ನು ಬಲಿಷ್ಠ, ಸಮೃದ್ಧವಾಗಿ ನಿರ್ಮಾಣ ಮಾಡಬೇಕು. ಜೊತೆಗೆ ಹಿಂಸೆಗೆ ಅವಕಾಶವಿಲ್ಲದಂತೆ ನೋಡಿಕೊಂಡು ಎಲ್ಲರ ನಡುವೆ ಸಹೋದರತ್ವ ಭಾವನೆ ಬೆಳಸಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಕರೆ ನೀಡಿದರು.

ನಗರದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಂಸದ ಐ.ಜಿ.ಸನದಿ, ಕಾಂಗ್ರೆಸ್ ಮುಖಂಡರಾದ ಶಿವಾ ನಾಯ್ಕ, ಸದಾನಂದ ಡಂಗನವರ, ಶರಣಪ್ಪ ಕೊಟಗಿ, ಶಾಕೀರ್ ಸನದಿ ಮಾತನಾಡಿದರು.

ಪಕ್ಷದ ಪ್ರಮುಖರಾದ ದೀಪಾ ನಾಗರಾಜ್ ಗೌರಿ, ರಾಜಶೇಖರ ಮೆಣಸಿನಕಾಯಿ, ಅಲ್ತಾಫ್ ನವಾಜ್ ಕಿತ್ತೂರ, ರಜತ್ ಉಳ್ಳಾಗಡ್ಡಿಮಠ, ದಶರಥ ವಾಲಿ, ಸಂತೋಷ ಜಕ್ಕಪ್ಪನವರ, ಮಹೆಮೂದ ಕೊಳೂರ, ಬಂಗಾರೇಶ ಹಿರೇಮಠ, ಶರೀಫ ಗರಗದ, ಬಸವರಾಜ ಬೆಣಕಲ್, ಪ್ರಕಾಶ ಬುರಬುರೆ, ಪುಷ್ಪಾ ಪಾಟೀಲ, ಜಾವೀದ್ ಬೇಪಾರಿ ನವೀದ್ ಮುಲ್ಲಾ, ಸಾಗರ ಹಿರೇಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬಿಜೆಪಿ: ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ರಾಮಜನ್ಮಭೂಮಿ ಹೋರಾಟದ ಕರಸೇವಾ ಕಾರ್ಯಕರ್ತ ಗುರುಸಿದ್ದಪ್ಪ ಶೆಲ್ಲಿಕೇರಿ ಧ್ವಜಾರೋಹಣ ನೆರವೇರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಮಾತನಾಡಿ ’ದೇಶವು ರಕ್ಷಣಾ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು ನರೇಂದ್ರ ಮೋದಿ ಅವರ ಮುಂದಾಳತ್ವದ ಸರ್ಕಾರ ಜನಪರವಾಗಿದೆ’ ಎಂದರು.

ಪಕ್ಷದ ಪ್ರಮುಖರಾದ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ರವಿ ನಾಯ್ಕ, ಸುಧೀರ ಸರಾಫ್, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಕುಂದಗೋಳಮಠ, ಬಸವರಾಜ ಅಮ್ಮಿನಬಾವಿ, ಕಿರಣ ಉಪ್ಪಾರ, ಜಗದೀಶ ಬೂಳನವರ ಪಾಲ್ಗೊಂಡಿದ್ದರು.

ಆಮ್‌ ಆದ್ಮಿ: ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸ೦ತೋಷ ನರಗುಂದ ಧ್ವಜಾರೋಹಣ ನೆರವೇರಿಸಿ ’ಜನಸಾಮಾನ್ಯರಿಗೆ ಅಧಿಕಾರ ತಂದು ಕೊಡುವುದೇ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ನೀಡುವ ನಿಜವಾದ ಗೌರವ’ ಎಂದರು.

ಪಕ್ಷದ ಮುಖಂಡರಾದ ವಿಕಾಸ ಸೊಪ್ಪಿನ,ಲಕ್ಷ್ಮಣ ರಾಠೋಡ ಪ್ರತಿಭಾ ದಿವಾಕರ ಹಾಗು ಶಶಿಕುಮಾರ ಸುಳ್ಳದ ಕಾರ್ಯಕರ್ತರನ್ನು ಸಂಬೋಧಿಸಿ ಮಾತನಾಡಿದರು. ಬಳಿಕ ಪಕ್ಷದ ಮುಖಂಡರು ಟ್ರಾಫಿಕ್‌ ಐಯ್ಲೆಂಡ್‌ ಬಳಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.