ಹುಬ್ಬಳ್ಳಿ: ನಗರದ ಬಹುತೇಕ ಗಣಪತಿ ದೇವಸ್ಥಾನಗಳಲ್ಲಿ ಮಂಗಳವಾರ ‘ಅಂಗಾರಕ ಸಂಕಷ್ಟ ಚತುರ್ಥಿ’ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಇಲ್ಲಿನ ದಾಜೀಬಾನ್ ಪೇಟೆ, ಬಾಕಳಿಗಲ್ಲಿ, ಅಕ್ಕಿಹೊಂಡ, ಅರವಿಂದನಗರ, ಅಯೋಧ್ಯ ನಗರ, ಗೋಕುಲರಸ್ತೆ, ಮಂಜುನಾಥ ನಗರ, ವಿಶ್ವೇಶ್ವರ ನಗರ ಸೇರಿದಂತೆ ನಗರದೆಲ್ಲೆಡೆ ಇರುವ ಗಣೇಶ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ವರ್ಷದ ಮೊದಲ ಸಂಕ್ಷಷ್ಟ ಚತುರ್ಥಿ ಮಂಗಳವಾರವೇ ಬಂದಿರುವ ಕಾರಣ ಇದನ್ನು ‘ಅಂಗಾರಕ ಸಂಕಷ್ಟ ಚತುರ್ಥಿ’ ಎಂದೂ ಹೇಳಲಾಗುತ್ತದೆ. ಉಳಿದ ಸಂಕಷ್ಟಿಗಳಿಗಿಂತ ಈ ದಿನವನ್ನು ಶ್ರೇಷ್ಠ ಎಂತಲೂ ಹೇಳಲಾಗುತ್ತದೆ.

ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕ ಭಕ್ತರು ಸರದಿಯಲ್ಲಿ ನಿಂತು ಗಣೇಶನಿಗೆ ಪ್ರಿಯವಾದ ಗರಿಕೆ, ಬೆಲ್ಲ, ಮೋದಕ ಹಾಗೂ ಲಡ್ಡು ಸಮರ್ಪಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.