ಹುಬ್ಬಳ್ಳಿ: ಇಲ್ಲಿನ ಜೆ.ಸಿ.ನಗರ ಎಂಪ್ಲಾಯಿಸ್ ಹಾಲ್ನಲ್ಲಿ ಭಾನುವಾರ ನಡೆದ ಬಿ.ಎಸ್.ಎನ್.ಎಲ್ ನೌಕರರ ಸಂಘದ ವಾರ್ಷಿಕ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸಂಘದ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ, ಘೋಷಣೆ ಕೂಗಿದ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ರಾಜೀನಾಮೆಗೆ ಆಗ್ರಹಿಸಿದರು.

ಸಾಲ ಹಾಗೂ ತಿಂಗಳ ಕಂತಿನ ಹಣವನ್ನು ವೇತನದಲ್ಲಿ ಕಡಿತ ಮಾಡದೇ ಸಹಕಾರಿ ಸಂಘದ ಬೈಲಾ ಉಲ್ಲಂಘನೆ ಮಾಡಲಾಗಿದೆ ಎಂದು ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.

ಸದಸ್ಯ ಮೋತಿಲಾಲ ರಾಥೋಡ್ ಮಾತನಾಡಿ, ‘ಸಹಕಾರಿ ಅಭಿವೃದ್ಧಿ ಅಧಿಕಾರಿಯ ವರದಿಯಂತೆ ಸಂಘದ ಸದಸ್ಯರ ಸಾಲ ಹಾಗೂ ತಿಂಗಳ ಕಂತಿನ ಹಣ ಕಡಿತದ ಬಗ್ಗೆ ಪರಿಶೀಲನೆ ನಡೆಸಿಲ್ಲ. ಈ ಬಗ್ಗೆ ನಾವು ಕೇಳಿದ ಲಿಖಿತ ಮಾಹಿತಿ ನೀಡದಿರುವುದು ಅನುಮಾನ ಮೂಡಿಸಿದೆ’ ಎಂದು ಹೇಳಿದರು.

‘2019ರ ಸೆಪ್ಟೆಂಬರ್ನಿಂದ ಪ್ರಸಕ್ತ ವರ್ಷದ ಮೇ ವರೆಗೆ ಸಾಲ ಹಾಗೂ ತಿಂಗಳ ಕಂತಿನ ಹಣವನ್ನು ಸದಸ್ಯರ ವೇತನದಲ್ಲಿ ಕಡಿತ ಮಾಡಿಲ್ಲ. ಅದನ್ನು ನೇರವಾಗಿ ಪಡೆಯಲಾಗಿದೆ. ಈ ಕುರಿತು ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ ನಂತರ ವೇತನದಲ್ಲಿ ಮಾಡಲಾಗುತ್ತಿದೆ’ ಎಂದರು.

ಅಧ್ಯಕ್ಷ ಚಂದ್ರಶೇಖರ ಅಬ್ಬಿಗೇರಿ, 2019ರ ಆಗಸ್ಟ್ 28ರಂದು ನಡೆದ ವಾರ್ಷಿಕ ಸಭೆಯಲ್ಲಿ ಸಾಲ ಹಾಗೂ ತಿಂಗಳ ಕಂತಿನ ಹಣವನ್ನು ನೇರವಾಗಿ ಪಡೆಯಲು 296 ಸದಸ್ಯರು ಒಪ್ಪಿಗೆ ನೀಡಿದ್ದರು ಎಂದರು.

ಮತ್ತೆ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಗಿರೀಶ ಚಿಂದಿ, ನಿರ್ದೇಶಕರಾದ ನವೀನ ಪಾಟೀಲ, ಆನಂದ ಬಡಿಗೇರ, ಸಂಗೀತಾ ಪಟ್ಟಣ, ಶಂಕರಪ್ಪ ಕಟ್ಟಿಮನಿ, ಮುಖ್ಯ ಕಾರ್ಯನಿರ್ವಾಹಕ ರಾಮಚಂದ್ರರಾವ್ ಎಸ್., ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.