ರಾತ್ರಿ ಕರ್ಫ್ಯೂ ವೇಳೆ ಭೂಮಿಪೂಜೆ ನೆರವೇರಿಸಿದ ಶಾಸಕ ಅರವಿಂದ ಬೆಲ್ಲದ

ಧಾರವಾಡ: ಕೋವಿಡ್–19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ.
ಇಲ್ಲಿನ ಧಾರವಾಡ ಹೋಟೆಲ್ ಬಳಿಯಿಂದ ಮಂದಾರ ಹೋಟೆಲ್ ವರೆಗೆ ₹25ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಬೆಲ್ಲದ ಅವರು ಶುಕ್ರವಾರ ರಾತ್ರಿ 8ಕ್ಕೆ ಬರಬೇಕಿತ್ತು. ಆದರೆ ಅವರು ಬರುವ ಹೊತ್ತಿಗೆ 10 ಆಗಿತ್ತು. ಆ ಹೊತ್ತಿಗೆ ಬಂದ ಶಾಸಕರು ಭೂಮಿಪೂಜೆ ನೆರವೇರಿಸಿದರು. ಮಾಸ್ಕ್ ಧಾರಣೆಗೆ ತಿಲಾಂಜಲಿ ಹೇಳಲಾಗಿತ್ತು.
ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೆದರೆ, ಸುಕಂನರಾಜ ಬಫನಾ, ಟಿ.ಎಸ್.ಪಾಟೀಲ, ಮೋಹನ ರಾಮದುರ್ಗ, ಕೇದಾರನಾಥ ಚವ್ಹಾಣ, ರಮೇಶ ದೊಡ್ಡವಾಡ, ನಾಗರಾಜ ನಾಯಕ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.