ಹುಬ್ಬಳ್ಳಿ: ನಾನು ಕುಸ್ತಿಯಲ್ಲಿ ಸಾಧನೆ ಮಾಡಬೇಕು ಎಂಬುದು ತಾತನ ಕನಸು. ಅದನ್ನು ನನಸು ಮಾಡುವ ಜತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಬೇಕು ಎಂಬುದು ನನ್ನ ಗುರಿ...’

ಇದು ಕುಸ್ತಿಪಟು 13 ವರ್ಷದ ಪ್ರಭಾವತಿ ಪ್ರಭಾವತಿ ಲಂಗೋಟಿಯ ಆತ್ಮವಿಶ್ವಾಸದ ನುಡಿಗಳು. ಬಾಗಲಕೋಟೆ ಜಿಲ್ಲೆಯ ಮುಧೋಳದ ಸೈದಾಪುರ ಗಲ್ಲಿಯ ಪ್ರಭಾವತಿ ಸದ್ಯ ಧಾರವಾಡದ ಆದರ್ಶ ಬಾಲಕಿಯರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿ.

2022 ಮತ್ತು 2023ರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸಿದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಪ್ರಭಾವತಿ, ಮರು ವರ್ಷ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದಿಂದ (ಎಸ್ಜಿಎಫ್ಐ) ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ಧಾಳೆ.

2024ರಲ್ಲಿ ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆ ಮತ್ತು ಉತ್ತರಪ್ರದೇಶದ ಗೋರಕಪುರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾಳೆ.

‘ನಮ್ಮದು ಕೃಷಿ ಕುಟುಂಬ. ನನ್ನ ಚಿಕ್ಕಪ್ಪ ಕುಸ್ತಿ ಪಟುವಾಗಿದ್ದರು. ಅವರು ಮೃತಪಟ್ಟ ನಂತರ ನನ್ನನ್ನು ಕುಸ್ತಿಪಟುಗಳನ್ನಾಗಿ ಮಾಡಬೇಕು ಎಂದು ನನ್ನ ತಾತಾ 2022ರಲ್ಲಿ ಧಾರವಾಡದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯಕ್ಕೆ ಸೇರಿಸಿದರು. ಸದ್ಯ ಶಿವಪ್ಪ ಪಾಟೀಲ ಅವರಿಂದ ತರಬೇತಿ ಪಡೆಯುತ್ತಿದ್ದೇನೆ’ ಪ್ರಭಾವತಿ ತಿಳಿಸಿದಳು.

‘ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುವ (ಜೂನ್ 21 ಮತ್ತು 22) 15 ವರ್ಷದೊಳಗಿನವರ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದು, ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಗುರಿ ಇದೆ. ಪ್ರತಿ ದಿನ ಐದು ಗಂಟೆ ಅಭ್ಯಾಸ ನಡೆಸುತ್ತೇನೆ’ ಎಂದಳು.

ಮೂರು ವರ್ಷಗಳಿಂದ ತರಬೇತಿ ನೀಡುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಅವಳಲ್ಲಿದೆ. ಆಕೆಯ ಪೋಷಕರ ಸಹಕಾರವೂ ಇದೆ
– ಶಿವಪ್ಪ ಪಾಟೀಲ ಕುಸ್ತಿ ತರಬೇತುದಾರ

ಎರಡು ವರ್ಷದವಳಿದ್ದಾಗಲೇ ಮುಧೋಳದ ಶಿವಾಜಿ ವೃತ್ತದ ಬಳಿಯ ಗರಡಿ ಮನೆಯಲ್ಲಿ ಅಭ್ಯಾಸ ಆರಂಭಿಸಿದೆ. ನನ್ನ ಸಾಧನೆಗೆ ತರಬೇತುದಾರ ಕುಟುಂಬದವರ ಪ್ರೋತ್ಸಾಹ ಕಾರಣ ಪ್ರಭಾವತಿ
– ಲಂಗೋಟಿ ಕುಸ್ತಿ ಪಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.