ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ವಿಜೇತ ಬೆಂಗಳೂರು ಆರ್ಮಿ ತಂಡಕ್ಕೆ ಅಮೃತ ದೇಸಾಯಿ ಅವರು ಟ್ರೋಫಿ ನೀಡಿ ಅಭಿನಂದಿಸಿದರು
ಧಾರವಾಡ: ತಾಲ್ಲೂಕಿನ ಹೆಬ್ಬಳ್ಳಿಯಲ್ಲಿ ಅಮೃತ ದೇಸಾಯಿ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಆರ್ಮಿ ತಂಡವು ಬಾಗಲಕೋಟೆ ತಂಡವನ್ನು ಪರಾಭವಗೊಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.
ADVERTISEMENT
ADVERTISEMENT
ಗ್ರಾಮದ ನೆಹರು ಪ್ರೌಢಶಾಲೆಯ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ರಾಜ್ಯ ವಿವಿಧ ಜಿಲ್ಲೆಗಳ ತಂಡಗಳು ಭಾಗವಹಿಸಿದ್ದರು. ಬೆಂಗಳೂರು ಆರ್ಮಿ ಹಾಗೂ ಬಾಗಲಕೋಟೆ ತಂಡದ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು.
ಟಾಸ್ ಗೆದ್ದ ಆಟ ಆರಂಭಿಸಿದ ಬೆಂಗಳೂರು ಆರ್ಮಿ ತಂಡ ಬಾಗಲಕೋಟೆ ತಂಡವನ್ನು ಪರಾಭವಗೊಳಿಸಿ ವಿಜಯ ಮಾಲೆ ಧರಿಸಿತು. ವಿಜೇತ ತಂಡಕ್ಕೆ ₹1ಲಕ್ಷ ನಗದು ಹಾಗೂ ಪಾರಿತೋಷಕವನ್ನು ಶಾಸಕ ಅಮೃತ ದೇಸಾಯಿ ನೀಡಿ ಅಭಿನಂದಿಸಿದರು.
ಬಾಗಲಕೋಟೆ ತಂಡ ₹50ಸಾವಿರ ನಗರದು ಹಾಗೂ ಸ್ಮರಣಿಕೆಯನ್ನು, ಕರ್ನಾಟಕ ಸೀನಿಯರ್ ಹಾಗೂ ಕರ್ನಾಟಕ ಜೂನಿಯರ್ ತಂಡಗಳು ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದ ತಲಾ ₹25ಸಾವಿರ ಬಹುಮಾನವನ್ನು ಪಡೆದವು.
ADVERTISEMENT
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ನಿತಿನ್ ಇಂಡಿ, ಸಂತೋಷ ಗೌಡ ಪಾಟೀಲ, ನಾಗನಗೌಡ ಪಾಟೀಲ, ಮಲ್ಲಿಕಾರ್ಜುನ ಬಾಳಿಕಾಯಿ, ಸಹದೇವ ಹಾವೇರಿ, ಚಂದ್ರು ಮೋರೆ, ಆತ್ಮಾನಂದ ಇದ್ದರು.