ಹೊರಟ್ಟಿ ಅವರ ರಾಜಕೀಯ ಸಾಧನೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಮುಂದಿನ ಬಾರಿ ಅವರು ಚುನಾವಣೆಗೆ ಸ್ಫರ್ಧಿಸಿ ಮತ್ತೊಂದು ಸಾಧನೆ ಮಾಡಲಿ
ಸಿದ್ದರಾಮಯ್ಯ ಮುಖ್ಯಮಂತ್ರಿ
ಗ್ರಾಮೀಣ ಭಾಗದ ಸಾಮಾನ್ಯ ವ್ಯಕ್ತಿ ಹೊರಟ್ಟಿ ಅವರು ಇಷ್ಟು ದೊಡ್ಡ ಸ್ಥಾನಕ್ಕೆ ಬರುತ್ತಾರೆ ಎಂದರೆ ಅವರಲ್ಲಿರುವ ಶಿಸ್ತುಬದ್ಧ ಬದುಕು. ಉತ್ತಮ ರಾಜಕೀಯ ವ್ಯಕ್ತಿತ್ವವುಳ್ಳ ಹೊರಟ್ಟಿ ಎಲ್ಲರಿಗೂ ಮಾದರಿ
ಯು.ಟಿ. ಖಾದರ್ ಸಭಾಧ್ಯಕ್ಷ ವಿಧಾನಸಭೆ
ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ನಿಮ್ಮೆಲ್ಲರ ಋಣ ಹೇಗೆ ತೀರಿಸಬೇಕೆಂದು ತಿಳಿಯುತ್ತಿಲ್ಲ. ಯಾರಿಗೂ ದ್ರೋಹ ಬಗೆಯದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಪ್ರಮಾಣ ಮಾಡುತ್ತೇನೆ
ಬಸವರಾಜ ಹೊರಟ್ಟಿ ಸಭಾಪತಿ ವಿಧಾನ ಪರಿಷತ್
ಸಾಮಾನ್ಯ ಕುಟುಂಬದಿಂದ ಬಂದು ದಿಗ್ಗಜ ನಾಯಕರಾಗಿ ಬೆಳೆದ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಶಿಕ್ಷಕರಿಗೆ ಅವರೊಬ್ಬ ಮಹಾನ್ ನಾಯಕ