ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದಲ್ಲಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ‘ಎಸ್ಎಸ್ಎಲ್ಸಿ ನಂತರ ಮುಂದೇನು?’ ವಿಶೇಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಇದೇ ತಿಂಗಳ 17ರಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ತನ್ನ ಸಭಾಂಗಣದಲ್ಲಿ ಆಯೋಜಿಸಿದೆ.

ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ, ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಂತರ ಸೂಕ್ತವಾದ ಶೈಕ್ಷಣಿಕ ಕೋರ್ಸ್ ಮತ್ತು ವೃತ್ತಿ ಮಾರ್ಗಗಳನ್ನು ಆಯ್ಕೆ ಮಾಡುವಾಗ ಗೊಂದಲ ಎದುರಿಸುತ್ತಾರೆ. ಈ ಸವಾಲನ್ನು ಗುರುತಿಸಿ, ಕೆಸಿಸಿಐ ವಿದ್ಯಾರ್ಥಿಗಳಿಗೆ ಲಭ್ಯವಿರುವ ಆಯ್ಕೆಗಳ ಮೂಲಕ ಮಾರ್ಗದರ್ಶನ ನೀಡಲು ಮತ್ತು ಅವರ ಭವಿಷ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಉದ್ಯಮ ತಜ್ಞರನ್ನು ಒಳಗೊಂಡ ಈ ಸಂವಾದಾತ್ಮಕ ಅಧಿವೇಶನವನ್ನು ಆಯೋಜಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿಯ ಮೆರಿಟ್ಯೂಡ್ ಸ್ಕಿಲ್ಸ್ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ಮುಖ್ಯ ಮಾರ್ಗದರ್ಶಕ ಇಲ್ಲೂರು ಮೋಹನರಾಜ್ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಭಾಷಣದ ನಂತರ ವಿದ್ಯಾರ್ಥಿಗಳು ವಿಷಯ ತಜ್ಞರ ಜೊತೆ ಸಂವಹನ ನಡೆಸಬಹುದಾಗಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 8105753471 ಮತ್ತು 9741991966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.