ಗುರುವಾರ , ಮೇ 26, 2022
25 °C

ನವಲಗುಂದ: ಒಂದೇ ದಿನ ನಿಧನರಾದ ಸಹೋದರರು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಲಗುಂದ: ಪಟ್ಟಣದ ಗೌಡರ ಓಣಿಯ ನಿವಾಸಿಗಳಾದ ಇಬ್ಬರು ಸಹೋದರರು ಒಂದೇ ದಿನ ಸೋಮವಾರ ಮೃತಪಟ್ಟಿದ್ದಾರೆ. 

ಭಾವಸಾರ ಕ್ಷತ್ರಿಯ ಸಮಾಜದ ಹಿರಿಯರಾದ ತುಕಾರಾಮ ಈಶ್ವರಪ್ಪ ಒಂಟಕರ (65) ಮಧ್ಯಾಹ್ನ ನವಲಗುಂದದಲ್ಲಿ ನಿಧನರಾದರೆ, ಇವರು ಮೃತಪಟ್ಟ ಒಂದು ತಾಸಿನ ನಂತರ ಹುಬ್ಬಳ್ಳಿ ಸಾಯಿನಗರದಲ್ಲಿ ವಾಸವಿದ್ದ ಇವರ ಸಹೋದರ ಯಲ್ಲಪ್ಪ ಈಶ್ವರಪ್ಪ ಒಂಟಕರ (68) ಸಾವನ್ನಪ್ಪಿರುವುದು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ. ಇಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ತುಕಾರಾಮ ಒಂಟಕರ ಅವರಿಗೆ ಪತ್ನಿ, ನಾಲ್ವರು ಪುತ್ರಿಯರು ಇದ್ದಾರೆ. ಯಲ್ಲಪ್ಪ ಒಂಟಕರ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು