ಹುಬ್ಬಳ್ಳಿ: ಬಾಗಲಕೋಟೆ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಮತ್ತು ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ.

ಏ.21 ರಿಂದ 25 ರವರೆಗೆ ವಿಜಯಪುರ- ಎಸ್ಎಸ್ಎಸ್ ಹುಬ್ಬಳ್ಳಿ (06920) ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ (06919) ಪ್ಯಾಸೆಂಜರ್ ವಿಶೇಷ ರೈಲುಗಳು ರದ್ದಾಗಿರುತ್ತವೆ. ಎಸ್ಎಸ್ಎಸ್ ಹುಬ್ಬಳ್ಳಿ-ಸೋಲಾಪುರ ಪ್ಯಾಸೆಂಜರ್ ರೈಲು (56906) ಏ.21 ರಿಂದ 24 ರವರೆಗೆ ಹಾಗೂ ಸೋಲಾಪುರ-ಧಾರವಾಡ ಪ್ಯಾಸೆಂಜರ್ ರೈಲು (56903) ಏ.22 ರಿಂದ 25 ರವರೆಗೆ ರದ್ದಾಗಲಿವೆ.

ಪ್ರಮುಖ ಎಕ್ಸ್ಪ್ರೆಸ್ ರೈಲುಗಳಾದ ಸೋಲಾಪುರ- ಹೊಸಪೇಟೆ ಎಕ್ಸ್ಪ್ರೆಸ್ (11415) ಏ.22 ರಿಂದ 24 ರವರೆಗೆ ಮತ್ತು ಹೊಸಪೇಟೆ-ಸೋಲಾಪುರ ಎಕ್ಸ್ಪ್ರೆಸ್ (11416) ಏ.23 ರಿಂದ 25 ರವರೆಗೆ ರದ್ದಾಗಲಿವೆ. ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ ಎಕ್ಸ್ಪ್ರೆಸ್ ವಿಶೇಷ ರೈಲು (07329) ಏ.22 ರಿಂದ 24 ರವರೆಗೆ ಮತ್ತು ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ವಿಶೇಷ ರೈಲು (07330) ಏ.23 ರಿಂದ 25ರವರೆಗೆ ರದ್ದಾಗಲಿವೆ.

ಏಪ್ರಿಲ್ 20 ರಿಂದ 24 ರವರೆಗೆ ಮಂಗಳೂರು ಸೆಂಟ್ರಲ್ನಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಸಂಚಾರ ರದ್ದುಗೊಳಿಸಲಾಗಿದೆ. ಈ ರೈಲು ಹುಬ್ಬಳ್ಳಿಯವರೆಗೆ ಮಾತ್ರ ಸಂಚರಿಸಲಿದೆ. ಏಪ್ರಿಲ್ 21 ರಿಂದ 25 ರವರೆಗೆ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ವಿಜಯಪುರದ ಬದಲು ಹುಬ್ಬಳ್ಳಿಯಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣವನ್ನು ಆರಂಭಿಸಲಿದೆ. ವಿಜಯಪುರ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.

ಏಪ್ರಿಲ್ 20 ರಿಂದ 24 ರವರೆಗೆ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಗದಗ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಗದಗಿನಲ್ಲಿ ತನ್ನ ಸೇವೆಯನ್ನು ಕೊನೆಗೊಳಿಸಲಿದೆ. ಏಪ್ರಿಲ್ 21 ರಿಂದ 25 ರವರೆಗೆ ರೈಲು ಸಂಖ್ಯೆ 06546 ವಿಜಯಪುರ-ಯಶವಂತಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ವಿಜಯಪುರದ ಬದಲು ಗದಗಿನಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ವಿಜಯಪುರ ಮತ್ತು ಗದಗ ನಡುವಿನ ಸಂಚಾರ ರದ್ದಾಗಿದೆ.

ಏಪ್ರಿಲ್ 20 ರಿಂದ 24 ರವರೆಗೆ ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟ ಬಸವ ಡೈಲಿ ಎಕ್ಸ್ಪ್ರೆಸ್ ರೈಲು ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಾಗಲಕೋಟೆಯ ಬದಲು ವಿಜಯಪುರದಲ್ಲಿ ತನ್ನ ಸೇವೆಯನ್ನು ಕೊನೆಗೊಳಿಸಲಿದೆ. ಅದೇ ರೀತಿ, ಏಪ್ರಿಲ್ 21 ರಿಂದ 25 ರವರೆಗೆ ಬಾಗಲಕೋಟೆಯಿಂದ ಹೊರಡುವ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಡೈಲಿ ಎಕ್ಸ್ಪ್ರೆಸ್ ರೈಲು ಬಾಗಲಕೋಟೆಯ ಬದಲು ವಿಜಯಪುರದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಡುವಿನ ರೈಲು ಸಂಚಾರ ರದ್ದಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.