ಫೆ. 22ಕ್ಕೆ ‘ಚಂಬಲ್‌’ ಚಿತ್ರ ಬಿಡುಗಡೆ

7

ಫೆ. 22ಕ್ಕೆ ‘ಚಂಬಲ್‌’ ಚಿತ್ರ ಬಿಡುಗಡೆ

Published:
Updated:

ಹುಬ್ಬಳ್ಳಿ: ಕಲಾವಿದೆ ಸೋನುಗೌಡ ಹಾಗೂ ನೀನಾಸಂ ಸತೀಶ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಚಂಬಲ್‌ ಸಿನಿಮಾ ಫೆ. 22ಕ್ಕೆ  ತೆರೆ ಕಾಣಲಿದೆ. 

ಸವಾರಿ ಹಾಗೂ ಪೃಥ್ವಿ ಚಿತ್ರದ ನಿರ್ದೇಶಕ ಜೇಕಬ್‌ ವರ್ಗಿಸ್‌, ಚಂಬಲ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೀನಾಸಂ ಸತೀಶ ‘ನೈಜ ಘಟನೆಯೊಂದನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ. ಗೋದ್ರಾ ಚಿತ್ರದ ನಿರ್ದೇಶಕ ಕೆಎಸ್‌. ನಂದೀಶ್‌ ಚಿತ್ರಕಥೆ ಹಾಗೂ ಶರತ್‌ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಯೂ ಟರ್ನ್‌ ಚಿತ್ರದ ಕಲಾವಿದರಾದ ರೋಜರ್‌ ನಾರಾಯಣ, ಕಿಶೋರ್, ಪವನ ಕುಮಾರ್‌, ಸರ್ದಾರ್‌ ಸತ್ಯ, ಗಿರಿಜಾ ಲೋಕೇಶ್ ಮತ್ತು ಅಚ್ಯುತ್‌ ಕುಮಾರ್‌ ಅಭಿನಯಿಸಿದ್ದಾರೆ’ ಎಂದರು.

‘ಜೀವನದಲ್ಲಿ ದೊಡ್ಡ ಅಧಿಕಾರಿಯ ಪಾತ್ರದಲ್ಲಿ ನಟಿಸಬೇಕೆನ್ನುವ ಆಸೆಯಿತ್ತು. ಅದು ಚಂಬಲ್‌ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಐಐಎಸ್‌ ಅಧಿಕಾರಿಯಾಗಿದ್ದೇನೆ’ ಎಂದರು.

ಈ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿದೆ. ಇದು ನನ್ನ ಮಗನ ಬದುಕಿನ ಕಥೆ ಆಧರಿಸಿ ನಿರ್ಮಿಸಿದ ಚಿತ್ರ ಎನ್ನುವ ಬಗ್ಗೆ ಸಂದೇಹವಿದೆ. ಇದು ನಿಜವೇ ಆಗಿದ್ದರೆ ನನಗೆ ಗೌರವಧನ ಕೊಡಿಸಬೇಕು ಎಂದು ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೇಕಬ್‌ ವರ್ಗೀಸ್‌ ‘ದೂರು ನೀಡಿರುವ ಪ್ರತಿ ನಮಗೆ ಬಂದಿಲ್ಲ. ಇದು ಡಿ.ಕೆ. ರವಿ ಅವರ ಬದುಕಿನ ಅಷ್ಟೇ ಅಲ್ಲ. ಹಲವರ ಕಥೆಗಳನ್ನಾಧರಿಸಿದ ಚಿತ್ರ. ಕೊಂಡಿದ್ದೇವೆ. ಆದರೆ, ಪೂರ್ಣವಾಗಿ ಅವರ ಬದುಕಿಗೆ ಸಂಬಂಧಿಸಿದ್ದಲ್ಲ’ ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !