ಧಾರವಾಡ: ಗ್ರಾಹಕರಿಗೆ ದೋಷಪೂರಿತ ಎಲೆಕ್ಟ್ರಿಕ್ ಸ್ಕೂಟರ್ ಪೂರೈಕೆ ದೂರಿನ ಪ್ರಕರಣದಲ್ಲಿ ವಾಹನ ಕಂಪನಿಗೆ ದಂಡವನ್ನು ವಿಧಿಸಿ, ವಾಹನದ ಹಣವನ್ನು ಬಡ್ಡಿಸಮೇತ ಗ್ರಾಹಕರಿಗೆ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ. ಅ.ಬೋಳಶೆಟ್ಟಿ ಆದೇಶ ನೀಡಿದ್ಧಾರೆ. ವಾಹನ ಖರೀದಿಗೆ ಗ್ರಾಹಕರು ಸಂದಾಯ ಮಾಡಿದ್ದ ಹಣಕ್ಕೆ ವಾರ್ಷಿಕ ಶೇ10 ಬಡ್ಡಿ ಲೆಕ್ಕ ಹಾಕಿ ಹಣವನ್ನು ನೀಡಬೇಕು. ₹50 ಸಾವಿರ ಪರಿಹಾರ ಹಾಗೂ ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ?: ಹುಬ್ಬಳ್ಳಿಯ ಶ್ರೀಕಾಂತ ರತನ, ಸವಿತಾ ಜಾಧವ, ಪ್ರಮೀಳಾ ನಾಯಕ ಅವರು 2023ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಖರೀದಿಸಿದ್ದರು. ಕೆಲವೇ ದಿನಗಳಲ್ಲಿ ಸ್ಕೂಟರ್ಗಳಲ್ಲಿ ದೋಷ (ಸ್ಕೂಟರಗಳಲ್ಲಿ ಬ್ಯಾಟರಿ ಸಮಸ್ಯೆ, ಚಲಿಸುವಾಗ ಸಡನ್ನಾಗಿ ನಿಲ್ಲುವುದು..) ಕಂಡುಬಂದಿದ್ದವು. ಸ್ಕೂಟರ್ಗಳನ್ನ ರಿಪೇರಿಗೆ ಒಯ್ದಿದ್ದ ಸರ್ವಿಸ್ ಸ್ಟೇಷನ್ ವಾಪಸ್ ಹಿಂದಿರುಗಿಸಿಲ್ಲ ಎಂದು ಮೂವರೂ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.