ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜುಮನ್‌ನಿಂದ ಕೋವಿಡ್‌ ಕೇರ್‌ ಕೇಂದ್ರ ಸಿದ್ಧ

Last Updated 3 ಆಗಸ್ಟ್ 2020, 15:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಂಜುಮನ್ ಸಂಸ್ಥೆ ಸ್ವಯಂ ಪ್ರೇರಿತವಾಗಿ ನಗರದ ಪಿ.ಬಿ. ರಸ್ತೆಯ ಅಂಜುಮನ್ ಹಾಲ್ ಬಳಿಯಿರುವ ವಸತಿ ಗೃಹದಲ್ಲಿ 125 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರವನ್ನು ಸಿದ್ಧಪಡಿಸಿದೆ.

ಅಂಜುಮನ್‌ ಸಂಸ್ಥೆ ಪದಾಧಿಕಾರಿಗಳು ಅವುಗಳನ್ನು ಪರಿಶೀಲಿಸಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಆಜಾದ್-ಕೊ-ಬ್ಯಾಂಕ್‌ನಿಂದ 50 ಕಬ್ಬಿಣದ ಮಂಚಗಳು ಹಾಗೂ ಕುಂಬಾರ ಮಜ್ಜೀದ್ ಜಮಾತ್ ಮೆಹಬೂಬ್ ಕಾಂಪ್ಲೆಕ್ಸ್ ವತಿಯಿಂದ 50 ಕಬ್ಬಿಣದ ಮಂಚಗಳು ದೇಣಿಗೆಯಾಗಿ ಬಂದಿವೆ. ಅವುಗಳಿಗೆ ಹಾಸಿಗೆಗಳು ಕೂಡ ದೇಣಿಗೆಯಾಗಿ ಲಭಿಸಿವೆ. ಇವುಗಳನ್ನು ಆದಷ್ಟು ಬೇಗನೆ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್‌ ನಾಜ್‌ ಕಿತ್ತೂರು ತಿಳಿಸಿದ್ದಾರೆ.

ಕೇಂದ್ರ ಹೇಗಿರಬೇಕು ಎನ್ನುವುದರ ಬಗ್ಗೆ ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ಅದಕ್ಕೆ ತಕ್ಕಂತೆ ರೂಪಿಸಲಾಗಿದೆ. ಬಿಸಿ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಸಂಸ್ಥೆ ಅಧ್ಯಕ್ಷ ಯೂಸುಫ್ ಸವಣೂರು, ಎ.ಎಂ. ಹಿಂಡಸಗೇರಿ, ನಾಜೀಂ ಹಿಂಡಸಗೇರಿ, ರಾಮು ಕುಂಬಾರ, ಅಬ್ದುಲ್ ದೇವಗಿರಿ, ಎಂ.ಎ. ಪಠಾಣ, ಮುನ್ನಾ ಹೆಬ್ಬಳ್ಳಿ, ಬಾಷಾಸಾಬ್‌ ಅತ್ತಾರ, ಬಾಬಾಜಾನ್‌ ಸವಣೂರು, ಚುಲ್ ಬುಲೆ, ಇಮಾಮ್ ಹುಸೇನ ಮಡಕಿ, ಸಲೀಂ ಸುಂಡಕೆ, ಮಹಮ್ಮದ್ ಕೊರಳ್ಳಿ, ಅಬ್ದುಲ್ ರಜಾಕ್‌ ಸೇರಿದಂತೆ ಹಲವಾರು ಸದಸ್ಯರು ಕೊಠಡಿಯ ಸಿದ್ಧತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT