ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಚಿರತೆ ದಾಳಿ; ಹಸು ಸಾವು

Published 22 ಮಾರ್ಚ್ 2024, 6:44 IST
Last Updated 22 ಮಾರ್ಚ್ 2024, 6:44 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ಮನಸೂರಿನ ಕರಿಯಮ್ಮ ಗುಡಿ ಸಮೀಪದ ಕೊಟ್ಟಿಗೆಗೆ ಚಿರತೆ ನುಗ್ಗಿ ಹಸುವೊಂದನ್ನು ಗುರುವಾರ ರಾತ್ರಿ ಕೊಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಗ್ರಾಮದ ಹೊಲದಲ್ಲಿ ಚಿರತೆ ಸಾಗಿದ್ದನ್ನು ಗ್ರಾಮಸ್ಥರೊಬ್ಬರು ನೋಡಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಚಿರತೆ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.

‘ಹೊಲದ ಕಣದಲ್ಲಿ ಬಣವೆ ಮೇಲೆ ಮಲಗಿದ್ದೆ. ರಾತ್ರಿ 3 ಗಂಟೆ ವೇಳೆಯಲ್ಲಿ ಪ್ರಾಣಿಯೊಂದು ಓಡುವ ಸದ್ದು ಕೇಳಿಸಿತು. ಕೆಳಗೆ ನೋಡಿದಾಗ ಚಿರತೆ ಓಡಿದ್ದು ಕಾಣಿಸಿತು’ ಎಂದು ಮನಸೂರಿನ ಕುಬೇರಪ್ಪ ಮಡಿವಾಳರ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಚಿರತೆ ಓಡಾಡಿರುವ ಜಾಗ ಪರಿಶೀಲಿಸಲಾಗಿದೆ. ಚಿರತೆ ಸೆತೆ ಹಿಡಿಯಲು ಆ ಭಾಗದಲ್ಲಿ ಬೋನು ಇಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT