ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕೀಲ ರವಿ ಹತ್ಯೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Published : 13 ಆಗಸ್ಟ್ 2024, 15:49 IST
Last Updated : 13 ಆಗಸ್ಟ್ 2024, 15:49 IST
ಫಾಲೋ ಮಾಡಿ
Comments

ನವಲಗುಂದ: ವಿಜಯಪುರ ಜಿಲ್ಲೆಯ ವಕೀಲರ ಸಂಘದ ಸದಸ್ಯ ರವಿ ಮೇಲಿನಮನಿ ಹತ್ಯೆಯ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಮತ್ತು ವಕೀಲರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎಚ್.ಕೋನರಡ್ಡಿ ಆಗ್ರಹಿಸಿದರು.

ಅವರು ಮಂಗಳವಾರ ವಕೀಲರ ಸಂಘದ ವತಿಯಿಂದ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ನಂತರ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಕೃಷ್ಣಾಜಿ ಅರೇರ ಅವರ ಮೂಲಕ ಮುಖ್ಯಮಂತ್ರಿಗಳ ಕಚೇರಿಗೆ ಮನವಿ ರವಾನಿಸಿದರು.

ಸಂಘದ ಪದಾಧಿಕಾರಿಗಳಾದ ಎನ್.ಬಿ.ಸವದಿ, ಎಸ್.ಎಸ್.ಅಸೂಟಿ, ಎಸ್.ಎನ್.ಡಂಬಳ, ಎ.ಎಸ್.ಹೊಳೆಯಣ್ಣನವರ, ಎ.ಎಲ್.ಜಾಂಬೋಟಿ, ನಮೀತ್ ಪಾಟೀಲ, ಆರ್.ವಿ.ಸಂಗಳದ, ಅರ್ಚನಾ ಜೋಶಿ, ಎಸ್.ಎಸ್.ಮಹಾರಾಜನವರ, ಕೆ.ಆರ್.ಮೇಟಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT