ಶನಿವಾರ, ಮೇ 15, 2021
25 °C

‘ಮ್ಯಾಟ್ರಿಮೊನಿ’ಯಲ್ಲಿ ಮೆಚ್ಚಿದ ಯುವತಿ ಮನೆ ಎದುರು ಆಂಧ್ರದ ಟೆಕ್ಕಿ ಧರಣಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಮ್ಯಾಟ್ರಿಮೊನಿ’ಯಲ್ಲಿ ಇಷ್ಟಪಟ್ಟಿದ್ದ ಯುವತಿಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿ ಟೆಕ್ಕಿಯೊಬ್ಬ ನಾಲ್ಕು ದಿನಗಳಿಂದ ಯುವತಿ ಮನೆ ಮುಂದೆ ಧರಣಿ ಕುಳಿತ್ತಿದ್ದ ಪ್ರಕರಣ ಗೋಕುಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚಕ್ರವರ್ತಿ ಎಂಬಾತ ಯುವತಿ ಮನೆ ಮುಂದೆ ಧರಣಿ ಕುಳಿತಿದ್ದ ಯುವಕ. ಮ್ಯಾಟ್ರಿಮೊನಿಯಲ್ಲಿ ಇಬ್ಬರೂ ಪರಸ್ಪರ ಮೆಚ್ಚಿಕೊಂಡಿದ್ದ ಕಾರಣಕ್ಕೆ ಮದುವೆ ಮಾಡಿಕೊಡುವುದಾಗಿ ಯುವತಿ ಕಡೆಯವರು ಆರಂಭದಲ್ಲಿ ಮಾತುಕೊಟ್ಟಿದ್ದರು. ಆದರೆ, ಜಾತಿ ಬೇರೆ ಎಂಬ ಕಾರಣಕ್ಕೆ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರ ಎನ್ನಲಾಗಿದೆ. ಇದರಿಂದ ನೊಂದ ಆತ ಯುವತಿ ಮನೆ ಮುಂದೆ ಧರಣಿ ಕುಳಿತಿದ್ದ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಹುಬ್ಬಳ್ಳಿಗೆ ಶುಕ್ರವಾರ ಬಂದ ಆತನ ಕುಟುಂಬದವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಡ್ನಿಯಲ್ಲಿ ಉದ್ಯೋಗದಲ್ಲಿದ್ದ ಚಕ್ರವರ್ತಿ ಕೆಲಸ ಕಳೆದುಕೊಂಡು ನಿರುದ್ಯೋಗಿಯಾದ ಬಳಿಕ ಮಾನಸಿಕವಾಗಿ ಅಸ್ವಸ್ಥನಾಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು