ಹುಬ್ಬಳ್ಳಿ: ಕೇಶ್ವಾಪುರದ ನಾಗೇಶ ಶರ್ಮಾ ಅವರಿಗೆ ವಾಟ್ಸ್ಆ್ಯಪ್ ವಿಡಿಯೊ ಕರೆ ಮಾಡಿದ ವಂಚಕರು, ಮುಂಬೈ ಪೊಲೀಸರ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ, ₹1.07 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ವಿಶ್ವಾಸ ಹಾಗೂ ಮತ್ತೊಬ್ಬ ವ್ಯಕ್ತಿ ನಾಗೇಶ ಅವರಿಗೆ ವಾಟ್ಸ್ಆ್ಯಪ್ ವಿಡಿಯೊ ಕರೆ ಮಾಡಿ, ‘ಮುಂಬೈನಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ₹2 ಕೋಟಿ ವ್ಯವಹಾರ ನಡೆಸಲು ಒ.ಎಂ. ಅಬ್ದುಲ್ ಸಲಾಮ್ ಅವರಿಂದ ₹20 ಲಕ್ಷ ಪಡೆದುಕೊಂಡಿರುವ ಕುರಿತು ಲೊಕಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಜಿಟಲ್ ಅರೆಸ್ಟ್ ಮೂಲಕ ತನಿಖೆ ನಡೆಸಲಾಗುತ್ತಿದ್ದು, ಹಣ ಪಾವತಿಸಬೇಕಾಗುತ್ತದೆ’ ಎಂದು ಬೆದರಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹19.49 ಲಕ್ಷ ವಂಚನೆ: ಹುಬ್ಬಳ್ಳಿ ತಾಲ್ಲೂಕಿನ ಗಾಮಗಟ್ಟಿಯ ದೇಸಾಯಿ ನಗರದ ಅಕ್ಷತಾ ಅವರಾದಿ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿನ ವರ್ಕ್ ಫ್ರಂ ಹೋಮ್ ಜಾಹೀರಾತು ನೋಡಿ, ವಂಚಕರ ಜಾಲಕ್ಕೆ ಸಿಲುಕಿ ₹19.49 ಲಕ್ಷ ಆನ್ಲೈನ್ನಲ್ಲಿ ಕಳೆದುಕೊಂಡಿದ್ದಾರೆ.

ಜಾಹೀರಾತು ವೀಕ್ಷಿಸಿದ ತಕ್ಷಣ ಅಕ್ಷತಾ ಅವರ ವಾಟ್ಸ್ಆ್ಯಪ್ ನಂಬರ್ಗೆ ಕೋಡ್ ನಂಬರ್ ಕಳುಹಿಸಿದ ವಂಚಕರು, ಸೂಪರ್ ಗ್ರೂಪ್ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ಗೆ ಅವರ ನಂಬರ್ ಸೇರಿಸಿದ್ದಾರೆ. ನಂತರ ಅವರಿಗೆ ವಿವಿಧ ಟಾಸ್ಕ್ ನೀಡಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಿಂದ ಆರ್ಟಿಜಿಎಸ್, ಫೋನ್ ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.