ಶನಿವಾರ, ನವೆಂಬರ್ 26, 2022
23 °C

ಗ್ರಾಪಂ ಸದಸ್ಯನ ಪತ್ನಿ ಆತ್ಮಹತ್ಯೆ: ಮೈದುನ ಸೇರಿ ಕುಟುಂಬದ ನಾಲ್ವರ ವಿರುದ್ಧ ಕೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮೂರು ತಿಂಗಳ ಹಿಂದೆ ಕೊಲೆಯಾಗಿದ್ದ ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ ಪಟದಾರಿ ಪತ್ನಿ ಪುಷ್ಪಾ ಪಟದಾರಿ ಆತ್ಮಹತ್ಯೆಗೆ ಸಂಬಂಧಿಸಿದಂತೆ, ಅವರ ಮೈದುನ ಸೇರಿ ನಾಲ್ವರ ವಿರುಧ್ಧ ನವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ನವನಗರದ ಸಿಟಿ ಪಾರ್ಕ್ ನ ಸಂಜಯ ಪಟದಾರಿ, ರೇಣುಕಾ ಚವಾಣ, ಶಿವಾಜಿ ಪಟದಾರಿ ಹಾಗೂ ಶಕುಂತಲಾ ಪಟದಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಪುಷ್ಪಾ ಅವರಿಗೆ, 'ನೀನು ಎಲ್ಲಿಯಾದರೂ ಹೋಗಿ ಸಾಯಿ. ನಿನ್ನ ಗಂಡನೊಂದಿಗೆ ನೀನು ಸಾಯಬೇಕಿತ್ತು. ಈಗ, ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ನಾವೇ ಸಾಕಬೇಕು' ಎಂದು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಪುಷ್ಪಾ ಅವರ ತಂದೆ ಬಸಪ್ಪ ಮುದಲಿಂಗಣ್ಣವರ ದೂರು‌ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು