ಹುಬ್ಬಳ್ಳಿ: ಧಾರವಾಡ ಜಿಲ್ಲಾ ಆರ್ಯ ಈಡಿಗರ ಸಂಘ, ಧಾರವಾಡ ಜಿಲ್ಲಾ ಆರ್ಯ ಈಡಿಗ ಸಂಘ, ಬಿಲ್ಲವ ಸಮಾಜ ಸೇವಾ ಸಂಘ, ನಾಮದಾರಿ ಹಿತವರ್ದಕ ಸಂಘ ಮತ್ತು ಐದು ಜಿಲ್ಲೆಗಳ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಈಚೆಗೆ ಚಿಂತನ–ಮಂಥನ ಸಭೆ ನಡೆಯಿತು. ವಿವಿಧ ವಿಷಯಗಳನ್ನು ಚರ್ಚಿಸಲಾಯಿತು ಮತ್ತು ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈಗಿರುವ 2ಎ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಬದಲಿಸದೇ ಯಥಾ ರೀತಿ ಮುಂದುವರಿಸಬೇಕು, ಕಾಂತರಾಜ ಆಯೋಗದ ವರದಿ ತಕ್ಷಣವೇ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಈಡಿಗ ಅಭಿವೃದ್ಧಿ ನಿಗಮ ಮಂಡಳಿಗೆ ₹ 500 ಕೋಟಿ ತಕ್ಷಣ ಬಿಡುಗಡೆ ಮಾಡಿ ಅಬಿವೃದ್ಧಿಪಡಿಸಬೇಕು, ಧಾರವಾಡದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪಿಸಬೇಕು, ಸಿಗಂದೂರು ಕ್ಷೇತ್ರವನ್ನು ಸರ್ಕಾರ ಮತ್ತು ರಾಜಕೀಯದ ಹಸ್ತಕ್ಷೇಪವಿಲ್ಲದೇ ಯಥಾಸ್ಥಿತಿ ಕಾಪಾಡಬೇಕು ಎಂದು ಒತ್ತಾಯಿಸಲಾಯಿತು.
ಶಿವಮೊಗ್ಗದ ಕಾರ್ತಿಕೇಯ ಪೀಠದ ಯೋಗೇಂದ್ರ ಸ್ವಾಮೀಜಿ, ಕೇರಳದ ವರ್ಕಳ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ, ಓಂಶಕ್ತಿ ಮಠದ ಪೀಠಾಧಿಪತಿ ಅರುಣಾನಂದ ಸ್ವಾಮೀಜಿ, ಗುರುಮೂರ್ತಿ ಸ್ವಾಮೀಜಿ, ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜೀತ್ ಸುರತ್ಕಲ್, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಂಘಟನಾ ಕಾರ್ಯದರ್ಶಿ ಬಸವರಾಜ ಈಳಿಗೇರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಈಳಿಗೇರ, ಧಾರವಾಡ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಸಿ.ಅರ್.ಡವಳಗಿ, ಪ್ರಮುಖರಾದ ವಿವೇಕ ಪೂಜಾರಿ, ತಿಮ್ಮಪ್ಪ ನಾಯಕ, ಸಂಧ್ಯಾ ಪೂಜಾರಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.