ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಗ್ರಾಮದೇವಿಯರ ಜಾತ್ರೆ ನಾಳೆಯಿಂದ

Published 30 ಏಪ್ರಿಲ್ 2023, 5:41 IST
Last Updated 30 ಏಪ್ರಿಲ್ 2023, 5:41 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ನರೇಂದ್ರ ಗ್ರಾಮದ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಜಾತ್ರೆಯು ಮೇ 1ರಿಂದ 11ರವರೆಗೆ ನಡೆಯಲಿದೆ.

12 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವ ಇದಾಗಿದೆ. ಈ ವರ್ಷ ಮಳೆಪ್ಪಜ್ಜನ ಮಠದ ದುಂಡಯ್ಯ ಸ್ವಾಮೀಜಿ ಮತ್ತು ಸಂಗಮೇಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಗ್ರಾಮದೇವಿಯ ಜಾತ್ರೆ ಆಯೋಜನೆಗೊಂಡಿದೆ. ಗ್ರಾಮದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ನೂತನ ರಥ ನಿರ್ಮಾಣ, ದೇವಸ್ಥಾನಕ್ಕೆ ಅಗತ್ಯ ಅಲಂಕಾರ, ಧಾರ್ಮಿಕ ವಿಧಿ ವಿಧಾನಗಳು, ಪ್ರಸಾದ ವ್ಯವಸ್ಥೆ, ಇನ್ನಿತರ ಕಾರ್ಯಗಳ ಸಿದ್ಧತೆ ಭರದಿಂದ ಸಾಗಿದೆ.

ಇಡೀ ಗ್ರಾಮದಲ್ಲಿ ವಿದ್ಯುದ್ದೀಪ ಮತ್ತಿತರ ಅಲಂಕಾರಗಳನ್ನು ಮಾಡಲಾಗಿದೆ. ಮೇ 1ರಿಂದ 10ರವರೆಗೆ ಪ್ರತಿದಿನ ಸಂಜೆ 7ಕ್ಕೆ ಕಲ್ಲಿನಾಥ ಶಾಸ್ತ್ರಿ ಅವರಿಂದ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 1ರಂದು ಬ್ರಾಹ್ಮಿ ಮುಹೂರ್ತದಲ್ಲಿ ಸಂಕಲ್ಪ, ಕಳಾಕರ್ಷಣೆ, ಹೋಮದೃಷ್ಟಿ, ಬರೆಯುವುದು, ಮಾಂಗಲ್ಯ ಧಾರಣೆ, ಉಡಿ ತುಂಬುವುದು, ಸಂಜೆ 7ಕ್ಕೆ ಹೊನ್ನಾಟ ನಡೆಯಲಿದೆ. ಮೇ 2ರಿಂದ 4ರವರೆಗೆ ದೇವಿಯರ ಹೊನ್ನಾಟ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೇ 5ರಂದು ಮಧ್ಯಾಹ್ನ ಗ್ರಾಮದೇವಿಯರ ರಥೋತ್ಸವ ನಡೆಯಲಿದೆ.

ಮೇ 6ರಿಂದ 10ರವರೆಗೆ ಗ್ರಾಮದೇವಿಯರಿಗೆ ಪಾದಗಟ್ಟಿಯಲ್ಲಿ ಉಡಿ ತುಂಬುವುದು ಮತ್ತಿತರ ಕಾರ್ಯಕ್ರಮ ನಡೆಯಲಿದೆ. ಮೇ 11ರಂದು ಬೆಳಿಗ್ಗೆ 11ಕ್ಕೆ ಧರ್ಮಸಭೆ, ರಾತ್ರಿ ಸೀಮೆಗೆ ಹೋಗುವ ಕಾರ್ಯಕ್ರಮ ಮತ್ತು ಮೇ 16ರಂದು ಗ್ರಾಮದೇವಿಯರನ್ನು ಗದ್ದಿಗೆಗೊಳಿಸ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT