ಅಳ್ನಾವರ: ಬುಧವಾರ ಸಂಜೆ ಏಕಾಎಕಿ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಹೊರ ವಲಯದ ಹೊಲ ಗದ್ದೆಗಳಲ್ಲಿ ಹಾಗೂ ರಾಶಿ ಹಾಕಿದ್ದ ಫಸಲನ್ನು ರಕ್ಷಿಲು ರೈತರು ಪರದಾಡಿದರು.

ಸುಮಾರು ಒಂದು ತಾಸು ಧಾರಾಕಾರ ಮಳೆ ಸುರಿಯಿತು. ಪಟ್ಟಣದ ತೆಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡಿದ್ದವು. ಇಂದಿರಾ ನಗರ ಹಾಗೂ ನೆಹರೂ ನಗರ ಬಡಾವಣೆ ಹಾಗೂ ಮಿಲ್ಲತ್ ಶಾಲೆಯ
ಹತ್ತಿರದ ರಸ್ತೆಗಳಲ್ಲಿ ನೀರು ನಿಂತಿತ್ತು. ಚರಂಡಿಗಳು ತುಂಬಿ ಹರಿದವು.

ಎಪಿಎಂಸಿ ಆವರಣದಲ್ಲಿ ಗೋವಿನ ಜೋಳ ಒಣಗಿಸಲು ಹಾಕಿದ ಪೈರನ್ನು ರಕ್ಷಿಸಲು ರೈತ ತಾಡಪತ್ರೆ ಹೊದಿಕೆ ಹಾಕಿ ಫಸಲನ್ನು ರಕ್ಷಸಿಕೊಂಡರು. ಮಳೆಯ ರಭಸಕ್ಕೆ ಹಲವಡೆ ಭತ್ತದ ಪೈರು ನೆಲಕ್ಕುರುಳಿದೆ. ದೀಪಾವಳಿ ಹಬ್ಬದ ಸಿದ್ದತೆಗೂ ಮಳೆ ಅಡ್ಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.