ಧಾರವಾಡ: ಕನ್ನಡ ಸಿನಿಮಾಗಳು ಜಗತ್ತಿನಲ್ಲಿ ಹೆಸರು ಮಾಡುತ್ತಿವೆ.ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಕರ್ನಾಟಕ ಕಾಲೇಜು (ಕೆಸಿಡಿ) ಮೈದಾನದಲ್ಲಿ ಗುರುವಾರ ನಡೆದ ‘ಲ್ಯಾಂಡ್ ಲಾರ್ಡ್’ ಸಿನಿಮಾ ಟೀಸರ್ ಹಾಗೂ ರೋಮಾಂಚಕ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಲ್ಯಾಂಡ್ ಲಾರ್ಡ್’ ಸಿನಿಮಾ ಈ ನೆಲದ ಕಥೆಯಾಗಿದ್ದು, ಜ.23 ರಂದು ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದರು.

ಲ್ಯಾಂಡ್ ಲಾರ್ಡ್ ಸಿನೆಮಾದ ನಿರ್ದೇಶಕರು ಧಾರವಾಡದವರೇ. ನಿರ್ಮಾಪಕರು ಉತ್ತರ ಕರ್ನಾಟಕ ಜನರು ಎಂದರು.

ನಟಿ ರಚಿತಾ ರಾಮ್ ಮಾತನಾಡಿ, ಧಾರವಾಡ ಜನರ ಪ್ರೀತಿ ಫೇಡಾದಷ್ಟೆ ರುಚಿಯಾಗಿದೆ. ನಮ್ಮ ಮಣ್ಣಿನ ಸಿನಿಮಾವನ್ನು ಎಲ್ಲರೂ ನೋಡಬೇಕು. ‘ನಿಂಗವ್ವ ನಿಂಗವ್ವ...’ ಹಾಡು ಹಿಟ್ ಆಗಿದೆ ಎಂದರು.

ನಟಿ ಭಾವನಾ ರಾವ್, ಗಾಯಕಿ ಪೃಥ್ವಿ ಭಟ್ , ಮಾಜಿ ಶಾಸಕಿ ಸೀಮಾ ಮಸೂತಿ, ಗುರುರಾಜ ಹುಣಸೀಮರದ, ನಾಗೇಶ ಕಲಬುರ್ಗಿ ಪಾಲ್ಗೊಂಡಿದ್ದರು.