ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ: ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ

Published : 6 ಆಗಸ್ಟ್ 2023, 16:28 IST
Last Updated : 6 ಆಗಸ್ಟ್ 2023, 16:28 IST
ಫಾಲೋ ಮಾಡಿ
Comments

ನವಲಗುಂದ: ನವಲಗುಂದದಿಂದ ಗದಗಿಗೆ ಹೋಗುವ ಬಸ್ ಟೈರ್‌ ಸಿಡಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರಿಗೆ ಡಿಕ್ಕಿ ಹೊಡೆದು ಹೊಲದಲ್ಲಿ ಹೋಗಿ ನಿಂತಿರುವ ಘಟನೆ ಭಾನುವಾರ ಜರುಗಿದೆ.

ಟ್ರ್ಯಾಕ್ಟರ್‌ನಲ್ಲಿ ಜಮೀನು ಕೆಲಸಕ್ಕೆ ಹೋಗುತ್ತಿದ್ದ ಪಟ್ಟಣದ ರೈತ ಫಕೀರೇಶ ಬೋಸ್ಲೆಗೆ ಗಂಭೀರ ಗಾಯವಾಗಿದೆ. ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇನ್ನೊಬ್ಬರೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗುಜರಿಗೆ ಹಾಕುವ ಬಸ್‌ಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ರಸ್ತೆಗೆ ಇಳಿಸುತ್ತಾರೆ ಎಂದು ಸಾರ್ವಜನಿಕರು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ನವಲಗುಂದ ಸಮೀಪದ ಅಣ್ಣಿಗೇರಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬಸ್ ಟ್ರ್ಯಾಕ್ಟರಿಗೆ ಡಿಕ್ಕಿ ಹೊಡೆದು ಹೊಲದಲ್ಲಿ ಹೋಗಿ ನಿಂತಿರುವುದು
ನವಲಗುಂದ ಸಮೀಪದ ಅಣ್ಣಿಗೇರಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬಸ್ ಟ್ರ್ಯಾಕ್ಟರಿಗೆ ಡಿಕ್ಕಿ ಹೊಡೆದು ಹೊಲದಲ್ಲಿ ಹೋಗಿ ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT