‘ಮೇಳದಲ್ಲಿ ಶೇಂಗಾ ಚಟ್ನಿ ಪುಡಿ, ಗುರೇಳು ಚಟ್ನಿ ಪುಡಿ, ಮಸಾಲೆ ಚಟ್ನಿ ಪುಡಿ, ಒಣ ಮೆಣಸಿನಕಾಯಿ ಪೌಡರ್ ಹಾಗೂ ಅರಿಸಿನ ಪುಡಿಯ ಮಾರಾಟವೂ ನಡೆಯಿತು. ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಯಿಂದ 100ಕ್ಕೂ ಅಧಿಕ ರೈತರು ಮೇಳದಲ್ಲಿ ಭಾಗವಹಿಸಿದ್ದರು. ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರೈತರಿಗೂ ಉತ್ತಮ ವ್ಯಾಪಾರವಾಗಿದೆ’ ಎಂದು ಹೇಳಿದರು.