ಭಾನುವಾರ, ಜೂನ್ 13, 2021
24 °C

ಸುರಕ್ಷತೆಯ ಸವಾಲಿನೊಂದಿಗೆ ಕರ್ತವ್ಯ - ಲಲಿತಾ ಶಿಂಧೆ, ಸ್ಟಾಫ್ ನರ್ಸ್

ನಿರೂಪಣೆ: ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

‘ಕೋವಿಡ್‌–19 ಎರಡನೇ ಅಲೆಯ ಪರಿಣಾಮ ಮೊದಲ ಅಲೆಗಿಂತಲೂ ಭೀಕರವಾಗಿದೆ. ನಮಗೀಗ ಬಿಡುವಿಲ್ಲದ ಕೆಲಸ. ಬೆಳಿಗ್ಗೆಯಿಂದ ಸಂಜೆವರೆಗೆ ಆಸ್ಪತ್ರೆಗೆ ಕೋವಿಡ್ ಪರೀಕ್ಷೆಗಾಗಿ ಬರುವವರ ಸ್ವಾಬ್ ಸಂಗ್ರಹಣೆ ಮತ್ತು ಕೋವಿಡ್ ಲಸಿಕೆ ಹಾಕುವುದರ ಜತೆಗೆ, ಕೋವಿಡ್‌ಯೇತರ ರೋಗಿಗಳ ಚಿಕಿತ್ಸೆಯತ್ತಲೂ ಗಮನ ಹರಿಸಬೇಕು. ಹಲವು ರೋಗಿಗಳ ಸಂಪರ್ಕಕ್ಕೆ ಬರುವ ವೈದ್ಯಕೀಯ ಸಿಬ್ಬಂದಿ, ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕಡಿಮೆಯೇ. ಮೊದಲ ಅಲೆಯಲ್ಲಿ ನನಗೂ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ವಿಶ್ರಾಂತಿ ಪಡೆದು ಚೇತರಿಸಿಕೊಂಡಿದೆ. ಈ ಸಲ ನಮಗೆ ಲಸಿಕೆ ನೀಡಿ ಕರ್ತವ್ಯಕ್ಕೆ ಸರ್ಕಾರ ಅಣಿಗೊಳಿಸಿದೆ’

‘ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್‌ನಿಂದಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಮಾಸ್ಕ್‌ ಮತ್ತು ಸ್ಯಾನಿಟೈಸರ್ ಬಳಕೆ ಮರೆಯುವಂತಿಲ್ಲ. ಕೋವಿಡ್ ಪರೀಕ್ಷೆ ಮಾಡುವಾಗ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪಿಪಿಇ ಕಿಟ್‌ ಧರಿಸಿಕೊಂಡೇ ಇರಬೇಕು. ಬೇರೇನೂ ಮಾಡುವಂತಿಲ್ಲ. ಕಿಟ್‌ ಧರಿಸಿದಾಗ ಬಿಸಿಗೆ ಮೈ ತುಂಬಾ ಧಗೆ ಹತ್ತಿದಂತಾಗುತ್ತದೆ. ಎಷ್ಟೊತ್ತಿಗೆ ತೆಗೆಯುತ್ತೇವೊ ಎನಿಸುತ್ತಿರುತ್ತದೆ’

‘ಕೋವಿಡ್‌ ಕರ್ತವ್ಯದ ಜತೆಗೆ ಕುಟುಂಬದ ನಿರ್ವಹಣೆ ಈಗ ನಿಜಕ್ಕೂ ಸವಾಲು.  ಮೂರು ವರ್ಷದ ಮಗುವನ್ನು ಬೆಳಿಗ್ಗೆ ಬಿಟ್ಟು ಬಂದರೆ, ಮತ್ತೆ ನೋಡುವುದು ಸಂಜೆಯೇ. ಬಿಡುವಾದರೆ, ಕರೆ ಮಾಡಿ ಮಾತನಾಡುತ್ತೇನೆ. ಮನೆಗೆ ಹೋದ ತಕ್ಷಣ ಬಟ್ಟೆ ಮತ್ತು ಬ್ಯಾಗ್ ಅನ್ನು ಪ್ರತ್ಯೇಕವಾಗಿಟ್ಟು, ಸ್ನಾನ ಮಾಡಿದ ಬಳಿಕವೇ ಕುಟುಂಬದವರ ಜತೆ ಮಾತು. ಜತೆಗೆ, ಉಳಿದ ಕೆಲಸಗಳನ್ನು ಶುರು ಮಾಡಬೇಕು. ನಮ್ಮ ಕರ್ತವ್ಯಕ್ಕೆ ಕೋವಿಡ್‌ ಹೊಸ ಸವಾಲು’

– ಲಲಿತಾ ಶಿಂಧೆ, ಸ್ಟಾಫ್ ನರ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರ, ರಾಜನಗರ, ಹುಬ್ಬಳ್ಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು