ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಏಪ್ರಿಲ್‌ 13ರಿಂದ ಎಡ್ಯುವರ್ಸ್ ಶೈಕ್ಷಣಿಕ ಮೇಳ

Published 11 ಏಪ್ರಿಲ್ 2024, 15:32 IST
Last Updated 11 ಏಪ್ರಿಲ್ 2024, 15:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಬಳಗದ ಕರ್ನಾಟಕದ ಪ್ರತಿಷ್ಠಿತ 14ನೇ ‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ ಏಪ್ರಿಲ್‌ 13 ಮತ್ತು 14ರಂದು ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಸಮೀಪದ ರಾಯ್ಕರ್ ಪ್ರದರ್ಶನ ಮೈದಾನದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನಡೆಯಲಿದೆ.

ಮೇಳಕ್ಕೆ ಉಚಿತ ಪ್ರವೇಶವಿದೆ. ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಒಂದೇ ಸೂರಿನಡಿ ಹಲವು ಪರಿಹಾರ ಕಂಡುಕೊಳ್ಳಬಹುದು.. ಎರಡು ದಿನಗಳ ಮೇಳದಲ್ಲಿ ಪರಿಣತರು, ತಜ್ಞರು ಸಂವಾದ, ಉಪನ್ಯಾಸ ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳುವರು. ಪಾಲಕರ ಅನುಮಾನ ನಿವಾರಣೆ ಸೇರಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಜ್ಞರು ಉತ್ತರಿಸುವರು.

ಅಣಕು ಪರೀಕ್ಷೆ:  ಸಿಇಟಿ, ಕಾಮೆಡ್‌–ಕೆ ಮತ್ತು ನೀಟ್‌ಗೆ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಮಾಕ್‌ ಟೆಸ್ಟ್‌ (ಅಣಕು ಪರೀಕ್ಷೆ) ಇರಲಿದೆ. ಆಸಕ್ತರು ಜಾಲತಾಣಕ್ಕೆ ಲಾಗಿನ್‌ ಆಗಿ, ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಸ್ಥಳ ಕಾಯ್ದಿರಿಸಿಕೊಳ್ಳಬಹುದು. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಸ್ಮಾರ್ಟ್ ವಾಚ್, ಇಯರ್ ಪಾಡ್ಸ್ ಮುಂತಾದವು ಗೆಲ್ಲಬಹುದು.

50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಮಳಿಗೆಗಳು ತೆರೆಯಲಿವೆ. ಮಳಿಗೆ ಹಾಕುವುದು ಅಲ್ಲದೇ, ವಿದ್ಯಾರ್ಥಿಗಳ  ಅಭಿರುಚಿಗೆ ತಕ್ಕಂತೆ ಕೋರ್ಸ್ ಆಯ್ಕೆ ಮಾಡಲು ತಜ್ಞರು ಸಂವಾದಿಸಿ, ಸಲಹೆ ನೀಡುವರು.

ಪಿಯುಸಿ ಅಥವಾ ತತ್ಸಮಾನ ಮತ್ತು ಪದವಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಸಿಗಲಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ‍ಪ್ರತಿನಿಧಿಗಳು ವಿಶೇಷ ಕೋರ್ಸ್‌, ಪದವಿಗಳ ಕುರಿತು ಮಾಹಿತಿ ನೀಡುವರು. ಇದು ವಿದ್ಯಾರ್ಥಿಗಳಿಗೆ ಅಲ್ಲದೇ ಪಾಲಕರಿಗೂ ಮಾರ್ಗದರ್ಶಿ ಆಗಲಿದೆ.

ಯಾವ ಕೋರ್ಸು ಮಾಡಿದರೆ ಸೂಕ್ತ? ಎಲ್ಲಿ ಉದ್ಯೋಗಾವಕಾಶ ಹೆಚ್ಚು? ಉದ್ಯೋಗಾರ್ಹತೆ ಪಡೆಯುವುದು ಹೇಗೆ? ಯಾವ ಶೈಕ್ಷಣಿಕ ಸಂಸ್ಥೆಗಳಲ್ಲಿ ಏನೆಲ್ಲ ಅನುಕೂಲಗಳಿವೆ? ಶಿಕ್ಷಣ ಸಾಲ ಪಡೆಯುವುದು ಹೇಗೆ ಎಂಬ ಬಗ್ಗೆಯೂ ತಿಳಿಯಬಹುದು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಉಪನ್ಯಾಸ, ಅವರ ಅನುಮಾನ ಪರಿಹರಿಸುವ ಕಾರ್ಯಕ್ರಮ ಕೂಡ ಇರಲಿದೆ. ಸಿಇಟಿ, ಕಾಮೆಡ್‌–ಕೆ ಮತ್ತು ನೀಟ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿ ಸಮಗ್ರವಾಗಿ ನೀಡಲಾಗುವುದು.

Ad6 Advertising ಸಹಯೋಗದಲ್ಲಿ ನಡೆಯುವ ಈ ಮೇಳಕ್ಕೆ ನ್ಯೂಸ್‌ ಫಸ್ಟ್‌ ಕನ್ನಡ ಟೆಲಿವಿಷನ್‌ ಪಾಲುದಾರ ಆಗಿದೆ.

ಉದ್ಘಾಟನೆ: ಏಪ್ರಿಲ್ 13ರಂದು ಬೆಳಿಗ್ಗೆ 10ಕ್ಕೆ ಏಕಸ್ ಬೆಳಗಾಂ ಸಂಸ್ಥೆಯ ಮುಖ್ಯ ತಾಂತ್ರಜ್ಞಾನ ಅಧಿಕಾರಿ (ಸಿಟಿಒ) ರವಿ ಗುತ್ತಲ್ ಮೇಳ ಉದ್ಘಾಟಿಸುವರು.

ವಿಶೇಷ ಉಪನ್ಯಾಸ: ಏಪ್ರಿಲ್ 13ರಂದು ಬೆಳಿಗ್ಗೆ 11ಕ್ಕೆ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಸಲಹೆಗಾರ ಶ್ರವಣ ನಾಯಕ್ ಅವರು ‘ಕಾಮೆಡ್‌–ಕೆ’ ಕುರಿತು ವಿಶೇಷ ಉಪನ್ಯಾಸ ನೀಡುವರು. ಏಪ್ರಿಲ್ 14ರಂದು ಬೆಳಿಗ್ಗೆ 11ಕ್ಕೆ ಇಂಗ್ಲಿಷ್ ಸಹಪ್ರಾಧ್ಯಾಪಕ ಮತ್ತು ಕೆ–ಸಿಇಟಿಯ ಮಾಜಿ ನೋಡಲ್ ಅಧಿಕಾರಿ ಗುರುನಾಥ ಬಡಿಗೇರ ವರು ಸಿಇಟಿ ಪರೀಕ್ಷೆ ಕುರಿತು ವಿಶೇಷ ಉಪನ್ಯಾಸ ನೀಡುವರು. ಈ ಎರಡೂ ಉಪನ್ಯಾಸದ ಮೂಲಕ ತಜ್ಞರು ನೀಡುವ ಮಾಹಿತಿ, ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬಹುದು. ಪರೀಕ್ಷೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಬಹುದು. ಸಲಹೆ, ಸೂಚನೆಗೆ ತಕ್ಕಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು.

ಜಾಲತಾಣ ವಿಳಾಸ: www.deccanherald.com/eduverse

ಮಾಹಿತಿಗಾಗಿ ಸಂಪರ್ಕಿಸಿ: ಗಿರೀಶ ಕಣವಿ–98809 08652.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT