ಭಾನುವಾರ, ಜುಲೈ 3, 2022
24 °C
ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಬಜೆಟ್‌ ಬಗ್ಗೆ ಮಾಹಿತಿ

ಆರೋಗ್ಯ, ಕೃಷಿ ಕ್ಷೇತ್ರಕ್ಕೆ ಒತ್ತು: ಆರ್.ಆರ್. ಬಿರಾದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್ ಮತ್ತು ಲಾಕ್‌ಡೌನ್‌ ಪರಿಣಾಮದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೂ, ಈ ಸಲದ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಹಾಗೂ ಪ್ರಾಧ್ಯಾಪಕ ಆರ್.ಆರ್. ಬಿರಾದಾರ ಹೇಳಿದರು.

ಎಸ್.ಜೆ.ಎಂ.ವಿ.ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಬಜೆಟ್‌ ಪ್ರಭಾವ ಮತ್ತು ಪರಿಣಾಮಗಳು ಕುರಿತು ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ’ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಕೈಗಾರಿಕೆ ಸೇರಿದಂತೆ ಎಲ್ಲ ಚಟುವಟಿಕೆಗಳು ಸ್ತಬ್ದವಾದವು. ಇದರಿಂದಾಗಿ ಸರ್ಕಾರಕ್ಕೆ ಬರಬೇಕಿದ್ದ ಆದಾಯ ನಿಂತು ಹೋಯಿತು. ದೇಶದ ಒಟ್ಟು ವರಮಾನವೂ ಕುಸಿಯಿತು. ಇದನ್ನು ಸರಿದೂಗಿಸಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ವಿತ್ತ ಸಚಿವರು ಪ್ರಯತ್ನಿಸಿದ್ದಾರೆ’ ಎಂದರು.

ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಸದಸ್ಯರೂ ಆದ ಬಿರಾದಾರ ಬಜೆಟ್‌ ಎಂದರೇನು? ಅದನ್ನು ಮಂಡಿಸಲು ಇರುವ ಮಾನದಂಡಗಳು, ಯೋಜನಾ ವೆಚ್ಚ, ಬಜೆಟ್‌ ತಯಾರಿ ಹೇಗಿರುತ್ತದೆ ಎನ್ನುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.

ಕಾಲೇಜಿನ ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ ಮಾತನಾಡಿ ‘ದೇಶದ ಎಲ್ಲ ವಲಯಗಳಿಗೆ ಪ್ರೋತ್ಸಾಹ ನೀಡಲು ಬಜೆಟ್‌ ಅತಿ ಪರಿಣಾಮಕಾರಿಯಾಗಿದೆ’ ಎಂದರು.

ಪ್ರೊ. ಶಿವಕುಮಾರ್ ಪ್ರಭಯ್ಯನವರಮಠ, ಡಾ. ತಾಯಣ್ಣ ಎಚ್. ಆಯೇಷಾ ಲುಕಮನ್, ವಿನಯಾ ಕಟಿಗಾರ, ಪ್ರೀತಿ ಮಠಪತಿ, ಡಾ. ಗುರುರಾಜ ನವಲಗುಂದ, ಡಾ. ಸುಪ್ರಿಯಾ ಮಲಶೆಟ್ಟಿ, ಪ್ರೊ. ಶಿವಕುಮಾರ ಬನ್ನಿಹಟ್ಟಿ, ಡಾ. ಮಹದೇವ ಹರಿಜನ, ಪ್ರೊ. ಶಶಾಂಕ,  ಪ್ರೊ. ಗಿರೀಶ ಕುಲಕರ್ಣಿ, ಪ್ರೊ. ಲಕ್ಷ್ಮಿ ತಿಮ್ಮನಗೌಡರ, ಪ್ರೊ. ಮೇಧಾ ಗೋಡಬೋಲೆ, ಪ್ರೊ. ಮಂಜುಳಾ ಹಿತ್ತಲಮನಿ, ಪ್ರೊ.ಸ್ನೇಹಾ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು