ಧಾರವಾಡ: ‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದಾಗಿದ್ದು, ರೈತರು ಗೌರವಕ್ಕೆ ಆರ್ಹರು' ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.

ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ರೈತ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

‘ಪ್ರಸ್ತುತ ಕೃಷಿ ಬಗ್ಗೆ ಯುವಕರಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಇದರಿಂದ ಕೃಷಿ ವಲಯ ಕ್ಷೀಣಿಸುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಕೃಷಿಗೆ ಅಡಚಣೆ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.

ಬಿಜೆಪಿ ಮುಖಂಡ ಪಿ.ಎಚ್.ನೀರಲಕೇರಿ ಮಾತನಾಡಿ, ‘ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರ ತನ್ನದೇ ಕೊಡುಗೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಡುಗೆ ನೀಡಬೇಕಿದೆ’ ಎಂದರು.

ಸಂಗಮೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಯಿ ವಿದ್ಯಾಮಂದಿರ ಅಧ್ಯಕ್ಷ ಈಶ್ವರ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಹಟ್ಟಿಹೊಳಿ, ಚನ್ನವೀರಗೌಡ ಪಾಟೀಲ, ಶಂಕರ ಕೋಮಾರ ದೇಸಾಯಿ, ಸಂಗಪ್ಪ ಆಯಟ್ಟಿ, ಮಂಜುನಾಥ ತಿರ್ಲಾಪೂರ, ವೀರಭದ್ರಪ್ಪ ಗಾಣಿಗೇರ, ಆತ್ಮಾನಂದ ಹುಂಬೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.