ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣ| ಮಗುವಿಗೆ ಹಾಲುಣಿಸುವ ತಾಯಂದಿರ ಕೊಠಡಿ ಉದ್ಘಾಟನೆ

Last Updated 18 ಸೆಪ್ಟೆಂಬರ್ 2022, 11:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಯಾಣದ ಸಂದರ್ಭದಲ್ಲಿ ಮಗುವಿಗೆ ಹಾಲುಣಿಸುವ ತಾಯಂದಿರ ಅನುಕೂಲಕ್ಕಾಗಿ ಇಲ್ಲಿನ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಹಾಲುಣಿಸುವ ಎರಡು ಕೊಠಡಿ ತೆರೆಯಲಾಗಿದೆ. ಸುರಕ್ಷಿತ ಮತ್ತು ಖಾಸಗಿ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಮೊದಲಬಾರಿಗೆ ರೈಲು ನಿಲ್ದಾಣದಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.

ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವಾಣಿಜ್ಯ ವ್ಯವಸ್ಥಾಪಕಿ ಹರೀತಾ ಎಸ್‌. ಕೊಠಡಿ ಸೌಲಭ್ಯಕ್ಕೆ ಚಾಲನೆ ನೀಡಿ, ‘ಮಗುವಿಗೆ ಹಾಲುಣಿಸುವ ತಾಯಂದಿರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊಠಡಿ ಸೌಲಭ್ಯ ಕಲ್ಪಿಸಲಾಗಿದೆ. ಇದು ಉಚಿತ ಸೇವೆಯಾಗಿದ್ದು, ಮುಂಬರುವ ದಿನಗಳಲ್ಲಿ ಬೆಳಗಾವಿ, ಬಳ್ಳಾರಿ, ಧಾರವಾಡ, ವಾಸ್ಕೋ ಡ ಗಾಮಾ, ವಿಜಯಪುರ, ಗದಗ ಮತ್ತು ಹೊಸಪೇಟೆ ನಿಲ್ದಾಣಗಳಲ್ಲಿಯೂ ಕೊಠಡಿ ಸೌಲಭ್ಯ ಒದಗಿಸಲು ಚಿಂತಿಸಲಾಗಿದೆ’ ಎಂದರು.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಉಪಸ್ಥಿತರಿದ್ದರು.

ರೈಲು ನಿಲ್ದಾಣದ ಪ್ರವೇಶದ್ವಾರದ ಸಭಾಂಗಣ ಮತ್ತು ನಿರೀಕ್ಷಣಾ ಕೊಠಡಿಯಲ್ಲಿ ಈ ಸೌಲಭ್ಯವಿದ್ದು, ಆರಾಮದಾಯಕವಾದ ಕುಷನ್‌ ಆಸನಗಳು, ಫ್ಯಾನ್‌, ವಿದ್ಯುದ್ದೀಪಗಳು, ವೆಂಟಿಲೇಷನ್‌, ಚಾರ್ಜಿಂಗ್‌ ಪಾಯಿಂಟ್‌, ಡೈಪರ್‌ ಬದಲಿಸುವ ವ್ಯವಸ್ಥೆ, ಡಸ್ಟ್‌ ಬಿನ್‌ಗಳನ್ನು ಒದಗಿಸಲಾಗಿದೆ. ಮೆ. ಬುಲ್ಸ್‌ ಐ ಮೀಡಿಯಾ ಪ್ರೈ.ಲಿ. ಕಂಪನಿ ರೈಲ್ವೆ ಇಲಾಖೆಗೆ ಈ ಸೌಲಭ್ಯ ಉಚಿತವಾಗಿ ಒದಗಿಸಿದ್ದು, ನಿರ್ವಹಣೆಯನ್ನೂ ಅದೇ ನೋಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT