ಧಾರವಾಡ: ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಸಾವು

ಧಾರವಾಡ: ತಾಲ್ಲೂಕಿನ ಇಟಿಗಟ್ಟಿ ಬಳಿ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
ಟೆಂಪೋ ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು, ಮೃತದೇಹಗಳು ಇನ್ನು ವಾಹನದಲ್ಲಿ ಸಿಲುಕಿಕೊಂಡಿವೆ. ತೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ದುರಂತದಲ್ಲಿ ಸಾವನ್ನಪ್ಪಿದ ಬಹುತೇಕರು ದಾವಣಗೆರೆ ನಗರದ ವಿದ್ಯಾನಗರ, ಎಂಸಿಸಿ (ಎ) ಬ್ಲಾಕ್ ಮತ್ತು ಎಂಸಿಸಿ (ಬಿ) ಬ್ಲಾಕ್ ನಿವಾಸಿಗಳು ಎಂದು ತಿಳಿದು ಬಂದಿದೆ.
ಕ್ರೇನ್ ಸಹಾಯದಿಂದ ಮಗುಚಿದ ವಾಹನವನ್ನು ಎತ್ತಿಡಲಾಗಿದೆ. ಒಳಗೆ ಸಿಲುಕಿರುವ ಮೃತದೇಹ ಪೊಲೀಸರು ಹೊರಕ್ಕೆ ಎಗೆಯುವ ಪ್ರಕ್ರಿಯೆ ನೆಡೆಸಿದ್ದಾರೆ.
ಇದನ್ನೂ ಓದಿ: ಅಪಘಾತ: ಸ್ನೇಹಿತೆಯರ ಸಂತಸ ಸಹಿಸದ ಜವರಾಯ
ಬೆಳಗಿನ ಜಾವ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಟೆಂಪೋ ಧಾರವಾಡದ ಸಮೀಪ ಬಂದಾಗ ಈ ಅಪಘಾತ ನಡೆದಿದೆ.
ಮೃತಪಟ್ಟವರ ವಿವರ
1) ಪೂರ್ಣಿಮಾ
2) ಪ್ರವೀಣಾ
3) ಪ್ರೀತಿ ರವಿಕುಮಾರ
4) ಮಾನಸಿ
5) ಪರಂಜ್ಯೋತಿ
6) ರಾಜೇಶ್ವರಿ ಶಿವಕುಮಾರ
7) ಶಕುಂತಲಾ
8) ಉಷಾ
9) ವೇದಾ
10) ನಿರ್ಮಲಾ
11) ಮಂಜುಳಾ ನಿಲೇಶ
12) ರಜನಿ ಶ್ರೀನಿವಾಸ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.