ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಜಾನ್ ಹಿನ್ನೆಲೆಯಲ್ಲಿ ಬಡವರಿಗೆ ಆಹಾರಧಾನ್ಯ ವಿತರಣೆ

Last Updated 1 ಮೇ 2019, 14:25 IST
ಅಕ್ಷರ ಗಾತ್ರ

ಧಾರವಾಡ: ರಮ್ಜಾನ್ ಉಪವಾಸ ಮೇ 7ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಫಾ ಬೈತುಲ್ ಮಾಲ್ ಸಂಸ್ಥೆ ವತಿಯಿಂದ ಬಡವರಿಗೆ ಅಡುಗೆ ಸಾಮಗ್ರಿಗಳನ್ನು ಬುಧವಾರ ಹಂಚಲಾಯಿತು.

300 ಬಡವರಿಗೆ ಉಚಿತವಾಗಿ ಆಹಾರ ಧಾನ್ಯವುಳ್ಳ ₹1500 ಮೌಲ್ಯದ ಕಿಟ್ ನಿಡಲಾಯಿತು. ಇದರಲ್ಲಿ 15 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ ಹಿಟ್ಟು, 2 ಕೆ.ಜಿ. ಬೇಳೆ, ಖಾರದಪುಡಿ, ರವೆ, ಅವಲಕ್ಕಿ, ಖರ್ಜೂರ, ಶಾವಿಗೆ, ಎಣ್ಣೆ, ಅರಿಶಿಣ, ಜೀರಿಗೆ, ಸಾಸಿವೆ ಸೇರಿದಂತೆ ಒಟ್ಟು 15 ವಸ್ತುಗಳು ಒಳಗೊಂಡಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಮೀರ ಮೆಹಬೂಬ್‌ಸಾಬ್ ಸೌದಾಗರ್, ‘ಉಪವಾಸದಲ್ಲಿ ಪವಿತ್ರತೆ ಇದೆ.ವ್ಯಕ್ತಿ ಮತ್ತು ಸಮುದಾಯ ಬೆಸೆಯುವ ಆಚರಣೆಯೇ ರಮ್ಜಾನ್‌. ಈ ಪದದ ಮೂಲ ಅರ್ಥ ರಮಿದ್‌ ಎಂಬುದಾಗಿದೆ. ಒಂದು ತಿಂಗಳ ಉಪವಾಸ, ಧಾನ– ಧರ್ಮ ಮಾಡುವ ಮೂಲಕ ನಿರಶನ ಹೊಂದುವುದು, ಅಹಂ, ಅರಿಷಡ್‌ವರ್ಗಗಳನ್ನು ಸುಟ್ಟು ಪಾವನಗೊಳ್ಳುವುದಾಗಿದೆ’ ಎಂದರು.

ಸಂಸ್ಥೆಯ ಮೊಹಮ್ಮದ್ ಅಲ್ತಾಫ್ ಶೇಖ್ ಮಾತನಾಡಿ,‘ಹಲವು ಗಂಟೆಗಳ ಕಾಲ ಕಟ್ಟುನಿಟ್ಟಿನ ಉಪವಾಸವಿದ್ದರೂ ಆರೋಗ್ಯದಲ್ಲಿ ಏರುಪೇರು ಆಗದಂತೆ ಹಾಗೂ ಅಗತ್ಯವಿರುವ ಜೀವಸತ್ವ ಕೊರತೆ ಅಗದಂತೆ ನೋಡಿಕೊಳ್ಳುವ ಈ ಉಪವಾಸ ಪದ್ಧತಿಯನ್ನು ಜಗತ್ತಿನೆಲ್ಲೆಡೆ ಮುಸ್ಲಿಮರು ಆಚರಿಸುತ್ತಾರೆ. ಈ ಹಬ್ಬ ಚಂದ್ರ ದರ್ಶನದಂತೆ 29 ಅಥವಾ 30 ದಿನಗಳ ಉಪವಾಸದ ಬಳಿಕ ಈದ್ ಉಲ್ ಫಿತರ್ ಮೂಲಕ ಕೊನೆಗೊಳ್ಳಲಿದೆ. ಈ ನಿಮಿತ್ತ ಬಡವರಿಗೆ ಅಕ್ಕಿ, ಅಹಾರ, ಬಟ್ಟೆ ಸಾಮಾಗ್ರಿಗಳನ್ನು ದಾನ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ’ ಎಂದು ವಿವರಿಸಿದರು.

‘ಮುಸ್ಲಿಮರು ಪಾಲಿಸಬೇಕಾದ ಐದು ಧರ್ಮಕಾರ್ಯಗಳಲ್ಲಿ ಒಂದಾಗಿರುವ ಉಪವಾಸವನ್ನು ಅರೆಬಿಕ್ ಭಾಷೆಯಲ್ಲಿ ‘ಸೌಮ’ ಎಂದೂ, ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ ‘ರೋಜಾ’ ಎಂದೂ, ಕರಾವಳಿಯ ಬ್ಯಾರಿ ಭಾಷೆಯಲ್ಲಿ ‘ನೋಂಬು’ ಎಂದೂ ಕರೆಯುವುದುಂಟು. ಧಾನದ ಭಾಗವಾಗಿ ₹6ಲಕ್ಷ ಮೌಲ್ಯದ 400 ಕಿಟ್‌ಗಳನ್ನು ತರಿಸಲಾಗಿದೆ. ಬುಧವಾರ 300 ಬಡ ಕುಟುಂಬಗಳಿಗೆ ಹಂಚಲಾಗಿದೆ. ಉಳಿದವುಗಳನ್ನೂ ಅರ್ಹರಿಗೆ ವಿತರಿಸಲಾಗುವುದು’ ಎಂದು ಅಲ್ತಾಫ್ ತಿಳಿಸಿದರು.

ಎಸ್‌.ಎಂ. ಇನಾಯತುಲ್ಲಾ ಅಥಾರ್, ಮೆಹಬೂಬ್‌ಸಾಬ್ ಬೀಡಿ, ಅಯೂಬ್‌ಖಾನ್‌ ಕಿತ್ತೂರು, ಲಿಯಾಕತ್‌ ಅಲಿ ಉಸ್ತಾದ್‌, ಅಬ್ದುಲ್ ರಶೀದ್‌ ತಹಶೀಲ್ದಾರ್, ದಾದಾಪೀರ್ ಮುಲ್ಲೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT