ಸೋಮವಾರ, ಅಕ್ಟೋಬರ್ 19, 2020
24 °C

ಬಡವರಿಗೆ ಉಚಿತವಾಗಿ ಕೃತಕ ಕಾಲುಜೋಡಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹಾವೀರ ಲಿಂಬ್ ಕೇಂದ್ರವು ದಾನಿಗಳ ನೆರವಿನಿಂದ ಬಡ ಅಂಗವಿಕಲರಿಗೆ ಉಚಿತವಾಗಿ ಕೃತಕ ಅಂಗ ಜೋಡಣೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಅಖಿಲ ಭಾರತ ಜೈನ್‌ ಯೂತ್‌ ಫೆಡರೇಷನ್‌ ಅಧ್ಯಕ್ಷ ಮಹೇಂದ್ರ ಸಿಂಘಿ ಹೇಳಿದರು.

ಇನ್ನರ್ ವೀಲ್ ಕ್ಲಬ್ ಮೇನ್ ಹಾಗೂ ಪಶ್ಚಿಮ ವಲಯದ ವತಿಯಿಂದ ಶನಿವಾರ ಮಹಾವೀರ ಲಿಂಬ್ ಕೇಂದ್ರಕ್ಕೆ 15 ಜನರಿಗೆ ಜೈಪುರ ಕೃತಕ ಅಂಗ ಜೋಡಣೆಗೆ ತಗಲುವ ವೆಚ್ಚವನ್ನು ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬದುಕಿನ ಕೆಟ್ಟ ಗಳಿಗೆಯಲ್ಲಿ ಅಂಗವಿಕಲರಾದವರು ಮತ್ತು ಹುಟ್ಟಿನಿಂದಲೇ ಈ ಸಮಸ್ಯೆ ಎದುರಿಸುತ್ತಿರುವವರಿಗೆ ಮಹಾವೀರ ಲಿಂಬ್‌ ಕೇಂದ್ರ ಆಶಾಕಿರಣವಾಗಿ 20 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದೆ. ಮೊದಲು ದಿನಕ್ಕೆ ಒಂದು ಅಂಗ ಮಾತ್ರ ಪೂರೈಸಲಾಗುತ್ತಿತ್ತು ಈಗ ದಿನಕ್ಕೆ 3 ರಿಂದ 4 ಅಂಗಗಳನ್ನು ಪೂರೈಕೆ ಮಾಡಲಾಗುತ್ತಿದೆ’ ಎಂದರು.

ಇನ್ನರವೀಲ್ ಕ್ಲಬ್‍ ಅಧ್ಯಕ್ಷೆ ಯೋಗಿತಾ ಮಾಂಡವಕರ ಮಾತನಾಡಿ ‘ಮುಂದೆಯು ಕ್ಲಬ್‍ನಿಂದ ಲಿಂಬ್ ಕೇಂದ್ರಕ್ಕೆ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಮಮತಾ ಹಟ್ಟಿಹೋಳಿ, ಇನ್ನರ್ ವೀಲ್ ಕ್ಲಬ್ ಪಶ್ಚಿಮ ವಲಯದ ಅಧ್ಯಕ್ಷ ಶೈಲಶ್ರೀ ಮುಮ್ಮಿಗಟ್ಟಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಗಡವಾಲ್, ಮಹಾವೀರ ಲಿಂಬ್ ಕೇಂದ್ರದ ಕಾರ್ಯಾಧ್ಯಕ್ಷ ವೀರೇಂದ್ರ ಜೈನ್, ಸಹಕಾರ್ಯದರ್ಶಿ ಮಹಾವೀರ ಕುಂದೂರ, ಸಂಚಾಲಕ ಪ್ರಕಾಶ ಕಟಾರಿಯಾ, ಸುಭಾಷ ಡಂಕ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ವಿಜಯಲಕ್ಷ್ಮೀ ಹಸಬಿ, ಸುಧಾ ಭಸ್ಮೆ, ಗೀತಾ ಕೆರೂರ, ಪ್ರವೀಣಾ ಕೋಳೆಕರ, ಸುದರ್ಶನ, ಅಶೋಕ ಮುಮ್ಮಿಗಟ್ಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು