ಮಂಗಳವಾರ, ಅಕ್ಟೋಬರ್ 27, 2020
22 °C

ಹುಬ್ಬಳ್ಳಿ: ಪದವೀಧರ ಮತದಾರರು ಬಿಜೆಪಿ ಪರ ಎಂದ ಸಚಿವ ಜಗದೀಶ ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪದವೀಧರ ಮತದಾರರೆಲ್ಲ ಬಿಜೆಪಿ ಪರವಾಗಿದ್ದು, ಅವರನ್ನೆಲ್ಲ ಮತಗಟ್ಟೆಗೆ ತರುವ ಕೆಲಸ ಮಾಡಬೇಕಿದೆ. ಶೇ 70ರಷ್ಟು ಮತದಾನವಾದರೆ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಸಚಿವ ಜಗದೀಶ ಶೆಟ್ಟರ್‌ ಭವಿಷ್ಯ ನುಡಿದರು.

ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ ‘ಬಿಜೆಪಿಗೆ ಚುನಾವಣೆ ಹೊಸದಲ್ಲ. ಅದರಲ್ಲೂ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಎಂದರೆ ಗೆಲುವು ಸಾಮಾನ್ಯ ಎನ್ನುವಂತಾಗಿದೆ. ಒಂದೆರಡು ಬಾರಿ ಸೋತಿದ್ದು, ನಂತರ ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ನಿರಂತರ ಗೆಲುವು ಸಾಧಿಸುತ್ತ ಬಂದಿದೆ’ ಎಂದರು.

ಬಿಜೆಪಿ ಅಭ್ಯರ್ಥಿ ಎಸ್‌.ವಿ. ಸಂಕನೂರ ‘ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳ ದೊಡ್ಡ ಪಟ್ಟಿಯೇ ಇತ್ತು. ಅವರೆಲ್ಲರೂ ತಮ್ಮಿಂದ ಸಾಧ್ಯವಾದಷ್ಟು ಪದವೀಧರರ ಹೆಸರನ್ನು ಮತಪಟ್ಟಿಗೆ ನೋಂದಣಿ ಮಾಡಿದ್ದಾರೆ. ಮೊದಲ ಅವಧಿಯಲ್ಲಿ ಪದವೀಧರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದು, ಇದೀಗ ಎರಡನೇ ಬಾರಿ ಆಯ್ಕೆ ಬಯಸಿದ್ದೇನೆ’ ಎಂದರು.

‘ಪದವೀಧರ ಮತದಾರರೆಲ್ಲ ಅಸಂಘಟಿತರು. ಅವರನ್ನೆಲ್ಲ ಸಂಪರ್ಕಿಸಬೇಕೆಂದರೆ ಅದೊಂದು ಸಾಹಸ. ಆದರೆ, ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿರುವ ಸಂಘಟನೆಗಳ ಮೂಲಕ ಅವರನ್ನು ತಲುಪುವ ಪ್ರಯತ್ನ ಮಾಡಬೇಕು. ಇದರಲ್ಲಿ ಕಾರ್ಯಕರ್ತರ ಕಾರ್ಯ ಪ್ರಮುಖವಾಗಿದೆ’ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹೇಳಿದರು.

ಶಾಸಕ ಸಿ.ಎಂ. ನಿಂಬಣ್ಣನವರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮುಖಂಡರಾದ ಈರಣ್ಣ ಜಡಿ, ಅಶೋಕ ಕಾಟವೆ, ಬಸವರಾಜ ಕುಂದಗೋಳ, ಪ್ರಭು ನವಲಗುಂದಮಠ, ನಾಗೇಶ ಕಲಬುರ್ಗಿ, ರವಿ ನಾಯ್ಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು