ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಜೋರು ಮಳೆ, ಗ್ರಾಹಕರ ಪರದಾಟ

ಹುಬ್ಬಳ್ಳಿ: ನಗರದಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಗುಡುಗು ಸಹಿತ ಜೋರು ಮಳೆ ಆರಂಭವಾಗಿದೆ.
ಬೆಳಗಿನ ಜಾವದಿಂದಲೇ ನಗರದಲ್ಲಿ ಮೋಡಕವಿದ ವಾತಾವರಣವಿತ್ತು. 6.30ರಿಂದ ಜೋರು ಮಳೆ ಆರಂಭವಾಯಿತು. ಎಪಿಎಂಸಿಯಲ್ಲಿ ತರಕಾರಿ ಖರೀದಿಸಲು ಬಂದಿದ್ದ ಗ್ರಾಹಕರು, ಮನೆಮನೆಗೆ ಹೋಗಿ ವ್ಯಾಪಾರ ಮಾಡುವವರು ಪರದಾಡಿದರು.
ದಿಢೀರನೆ ಜೋರಾಗಿ ಮಳೆ ಸುರಿದ ಕಾರಣ ಈರುಳ್ಳಿ ಹಾಗೂ ವಿವಿಧ ಪಲ್ಲೆಗಳ ವ್ಯಾಪಾರಿಗಳಿಗೆ ತರಕಾರಿಗಳನ್ನು ಸುರಕ್ಷಿತವಾಗಿ ಬುಟ್ಟಿಯಲ್ಲಿ ತುಂಬಿಡಲು ಸಾಧ್ಯವಾಗಲಿಲ್ಲ. ಎರಡು ದಿನಗಳ ಹಿಂದೆಯೂ ನಗರದಲ್ಲಿ ಇದೇ ರೀತಿ ಮಳೆ ಅಬ್ಬರಿಸಿತ್ತು. ಪತ್ರಿಕೆ ಹಂಚುವವರು, ಹಾಲಿನ ವ್ಯಾಪಾರಿಗಳು ಕೂಡ ಮಳೆಯಲ್ಲಿ ನೆಂದುಕೊಂಡೇ ಕೆಲಸ ನಿರ್ವಹಿಸಿದ ಚಿತ್ರಣ ಕಂಡು ಬಂತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.