ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಟೂರ್ನಿ: ಇಸ್ಲಾಮಾಪುರ ತಂಡ ಶುಭಾರಂಭ

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ತಂಡಗಳು ಭಾಗಿ
Last Updated 8 ಮೇ 2022, 2:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಗಂಗಾಧರ ನಗರ ಸೆಟ್ಲಮೆಂಟ್‌ನ ಯಂಗ್ ಸ್ಟಾರ್‌ ಕ್ರೀಡಾ ಮೈದಾನದಲ್ಲಿ ಶುಕ್ರವಾರ ಅಂತರ ರಾಜ್ಯಮ
ಟ್ಟದ ಆಹ್ವಾನಿತ ಹಾಕಿ ಟೂರ್ನಿಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

‘ಸೆಟ್ಲಮೆಂಟ್‌ ಎಂದರೆ ನೆನಪಾಗವುದು ಹಾಕಿ. ಇಲ್ಲಿನ ಆಟಗಾರರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಟೂರ್ನಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದ ತಂಡಗಳು ಭಾಗವಹಿಸಿವೆ. ಕ್ರೀಡಾಸ್ಫೂರ್ತಿಯಿಂದ ಆಟವಾಡಿ’ ಎಂದು ಸಲಹೆ ನೀಡಿದರು.

ವೈಎಸ್‌ಎಸ್‌ ಕ್ಲಬ್‌ನ ಅಧ್ಯಕ್ಷ ಯುಮನೂರ ಗುಡಿಹಾಳ, ಕಾರ್ಯದರ್ಶಿ ಚಂದ್ರಶೇಖರ ಗೋಕಾಕ ಹಾಗೂ ಖಜಾಂಜಿ ಪರಶುರಾಮ ಕೊರವಾರ ಉಪಸ್ಥಿತರಿದ್ದರು. ಎಸ್.ಡಿ. ಪಾಟೀಲ ಇಸ್ಲಾಮಾಪುರ ಶುಭಾರಂಭ: ಟೂರ್ನಿಯ ಮೊದಲ ಪಂದ್ಯದಲ್ಲಿ ಶಾಹು ಕೊಲ್ಲಾಪುರ ತಂಡವನ್ನು ಎಸ್‌.ಡಿ. ಪಾಟೀಲ ಇಸ್ಲಾಮಾಪುರ (ಮಹಾರಾಷ್ಟ್ರ) ತಂಡ 4–1 ಅಂತರದಿಂದ ಮಣಿಸಿ, ಶುಭಾರಂಭ ಮಾಡಿತು. ತಂಡದ ಸಚಿನ್ ಭೋಂಸ್ಲೆ ಎರಡು, ಪಂಕಜ್‌ ಪಾಟೀಲ ಹಾಗೂ ಸಚಿನ್‌ ಪಾಟೀಲ ತಲಾ ಒಂದು ಗೋಲ್ ಗಳಿಸಿ ಗೆಲುವಿಗೆ ಕಾರಣರಾದರು. ಶಾಹು ಕೊಲ್ಲಾಪುರ ತಂಡದ ಪ್ರವಣ್ ಸಿ. ಒಂದು ಗೋಲ್ ಗಳಿಸಿದರು.

ಡಿವೈಇಎಸ್‌ ಬೆಂಗಳೂರು ಹಾಗೂ ಯಂಗ್ ಸ್ಟಾರ್‌ ಸ್ಪೋರ್ಟ್ಸ್ ಕ್ಲಬ್ ‘ಬಿ’ ತಂಡದ ನಡುವಿನಎರಡನೇ ಪಂದ್ಯದಲ್ಲಿ 9–0 ಅಂತರದಿಂದ ಡಿವೈಇಎಸ್‌ ಬೆಂಗಳೂರು ತಂಡ ಗೆಲುವು ಸಾಧಿಸಿತು. ತಂಡದ ತೇಜು ಆರ್‌–5, ನಿತಿನ್‌ 2, ಸುಕಲ್ಯಾಣ್ ಹಾಗೂ ಪ್ರಜ್ವಲ್‌ ತಲಾ ಒಂದು ಗೋಲ್ ಹೊಡೆದರು.

3ನೇ ಪಂದ್ಯದಲ್ಲಿ ವಾಸು XI ಹುಬ್ಬಳ್ಳಿ ತಂಡದ ವಿರುದ್ಧ ಹನುಮಾನ್ ಬ್ಲೆಸ್ಸಿಂಗ್ ಗದಗ ತಂಡ 3–2 ಅಂತರ ಗೆಲುವು ಸಾಧಿಸಿತು. ತಂಡದ ಹರೀಶ್‌ ಮುತಗಾರ್‌ 2, ವಸಂತ್‌ ಗೊಕಾವಿ ಒಂದು ಗೋಲ್ ಹೊಡೆದರೆ, ವಾಸು XI ಹುಬ್ಬಳ್ಳಿ ತಂಡದ ಅಥರ್ವ ಹಗೂ ಪ್ರಮೋದ್‌ ತಲಾ ಒಂದು ಗೋಲ್ ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT