ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ರಕ್ಷಕರು ಸಿಬ್ಬಂದಿ ಕೊರತೆ ನೀಗಿಸಿದ್ದಾರೆ: ಡಿಸಿಪಿ ಡಿ.ಎಲ್. ನಾಗೇಶ್

Last Updated 2 ಜನವರಿ 2020, 11:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ನಿರ್ವಹಿಸುವ ಗೃಹ ರಕ್ಷಕ ದಳ ಸಿಬ್ಬಂದಿಯ ಸೇವೆ ಶ್ಲಾಘನೀಯ’ ಎಂದು ಡಿಸಿಪಿ ಡಿ.ಎಲ್. ನಾಗೇಶ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಗೃಹ ರಕ್ಷಕ ದಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯು ಗೃಹ ರಕ್ಷಕ ದಳದಿಂದ ಹೆಚ್ಚಿನ ಪ್ರಯೋಜನ ಪಡೆದಿದೆ. ಆ ಮೂಲಕ, ಗೃಹ ರಕ್ಷಕ ದಳವು ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಿದೆ’ ಎಂದರು.

‘ನೈಸರ್ಗಿಕ ವಿಕೋಪ, ಸಂಚಾರ ನಿರ್ವಹಣೆ, ಪ್ರವಾಹ ನಿರ್ವಹಣೆ ಹಾಗೂ ಧಾರವಾಡದಲ್ಲಿ ಕಟ್ಟಡ ಕುಸಿತ ಸಂಭವಿಸಿದಾಗ ಗೃಹ ರಕ್ಷಕ ಸಿಬ್ಬಂದಿ ಉತ್ತಮ ಕರ್ತವ್ಯ ಪ್ರಜ್ಞೆ ತೋರಿದ್ದಾರೆ. ಸೀಮಿತ ತರಬೇತಿ ಪಡೆದಿದ್ದರೂ, ಉತ್ತಮವಾಗಿ ಕಾರ್ಯನಿರ್ವಹಿಸುವ ಅವರ ಕೊಡುಗೆಯನ್ನು ಎಲ್ಲರೂ ಸ್ಮರಿಸಬೇಕು’ ಎಂದ ಹೇಳಿದರು.

ವಿವೇಕಾನಂದ ಜನರಲ್ ಆಸ್ಪತ್ರೆಯ ಸಿಇಒ ರಾಹುಲ ಮಂಗೇಕರ ಮಾತನಾಡಿ, ‘ಗೃಹ ರಕ್ಷಕ ಸಿಬ್ಬಂದಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸಲು ವಿವೇಕಾನಂದ ಜನರಲ್ ಆಸ್ಪತ್ರೆ ಸದಾ ಸಿದ್ಧವಾಗಿದೆ’ ಎಂದು ಭರವಸೆ ನೀಡಿದರು.

ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸತೀಶ ಎನ್. ಪಾಟೀಲ್, ಸಹಾಕ ಭೋಧಕರಾದ ಟಿ.ಎ. ಬದಾಮಿ, ಆರ್‌.ಎಚ್. ಶಾಂತಗೇರಿ, ಸಿಬ್ಬಂದಿ ಅಧಿಕಾರಿಗಳಾದ ಝಡ್.ಕೆ. ತಟಗಾರ, ಡಾ. ಸತೀಶ ವೈ. ಇರಕಲ್ಲ, ಎ.ಜಿ. ಸಾಳುಂಕೆ, ಡಾ. ಪ್ರಕಾಶ ಪಿ. ಪವಾಡಶೆಟ್ಟಿ, ಘಟಕಾಧಿಕಾರಿ ಕೆ.ಎಚ್‌. ಬ್ಯಾಡಗಿ ಹಾಗೂ ಕಂಪನಿ ಸಾರ್ಜಂಟ್ ಮೇಜರ್ ಎಚ್‌.ಐ. ಈಳಗೇರ ಇದ್ದರು.

ಬೆಳಿಗ್ಗೆ 8 ಗಂಟೆಗೆ ಕಾರವಾರ ರಸ್ತೆಯಲ್ಲಿರುವ ಸಿಎಆರ್‌ ಮೈದಾನದಲ್ಲಿ ನಡೆದ ಗೃಹ ರಕ್ಷಕ ಸಿಬ್ಬಂದಿಯ ಪಥ ಸಂಚಲನ ಗಮನ ಸೆಳೆಯಿತು.

ಅತಿಥಿಗಳ ಗೈರು ಹಾಜರಿ

ಮುಖ್ಯ ಅತಿಥಿಗಳ ಪಟ್ಟಿಯಲ್ಲಿದ್ದ 8 ಮಂದಿ ಪೈಕಿ, ಏಳು ಮಂದಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 12.45ಕ್ಕೆ ಶುರುವಾದರೂ ಅತಿಥಿಗಳಾದ ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಕಮಿಷನರ್ ಆರ್‌. ದಿಲೀಪ್, ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೇಕರ, ಬಿಆರ್‌ಟಿಎಸ್ ಜನರಲ್ ಮ್ಯಾನೇಜರ್ ಗಣೇಶ ರಾಠೋಡ ಗೈರು ಹಾಜರು ಎದ್ದು ಕಾಣುತ್ತಿತ್ತು. ಅಂತಿಮ ಕ್ಷಣದಲ್ಲಿ ಡಿಸಿಪಿ ಡಿ.ಎಲ್. ನಾಗೇಶ್ ಕಾರ್ಯಕ್ರಮಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT