ಗುರುವಾರ , ಡಿಸೆಂಬರ್ 1, 2022
27 °C

ಗೌನ್‌ ಧರಿಸದ ಮೇಯರ್‌: ಪ್ರತಿಭಟನೆ, ಅನಿರ್ದಿಷ್ಟ ಅವಧಿಗೆ ಸಭೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ಗೌನ್ ಧರಿಸದಿದ್ದಕ್ಕೆ ವಿರೋಧ ಪಕ್ಷದವರು ತೀವ್ರ ಪ್ರತಿಭಟನೆ ತೋರಿದ್ದಕ್ಕೆ ಮೇಯರ್ ಈರೇಶ ಅಂಚಟಗೇರಿ ಅವರು ಸಾಮಾನ್ಯ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ಸಾಮಾನ್ಯ ಸಭೆ ಬೆಳಿಗ್ಗೆ 11.30 ಕ್ಕೆ ಆರಂಭವಾದಾಗ ಮೇಯರ್ ಅವರು  ಗೌನ್ ಧರಿಸದೆ ಬಂದಿದ್ದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಗದ್ದಲ ಹೆಚ್ಚಾದಾಗ  ಅರ್ಧ ಗಂಟೆ ಸಭೆ ಮುಂದೂಡಿದರು.

ಪುನ: 12.30 ಕ್ಕೆ ಸಭೆ ಆರಂಭವಾದಾಗಲೂ ಈರೇಶ ಅವರು ಗೌನ್ ಧರಿಸದೇ ಬಂದರು. ಇದರಿಂದ ಕೆರಳಿದ ವಿರೋಧ ಪಕ್ಷದ ಸದಸ್ಯರು, ತೀವ್ರ ವಿರೋಧ ವ್ಯಕ್ತಪಡಿಸಿದರು. 

ಗದ್ದಲ ಹೆಚ್ಚಾದಾಗ ಈರೇಶ ಅವರು ಸಾಮಾನ್ಯ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು