ಹುಬ್ಬಳ್ಳಿ: ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಬಳಸುವ ತೆಂಗಿನ ಗರಿಯ ಪೊರಕೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಿದ್ಧಪಡಿಸುತ್ತಿದೆ. ಪಾಲಿಕೆಯ ಘನತ್ಯಾಜ್ಯ ನಿರ್ಹವಣಾ ವಿಭಾಗ ಮತ್ತು ಸಮುದಾಯ ಸಂಘಟನೆ ವಿಭಾಗದ ಸಹಯೋಗದಲ್ಲಿ ಈ ಯೋಜನೆ ಧಾರವಾಡದ 17ನೇ ವಾರ್ಡ್ ಮಂಜುನಾಥ ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.

ಪೊರಕೆ ತಯಾರಿಕೆಗೆಂದೇ ಪರಿಸರಪ್ರೇಮಿ ಡಾ. ಸಂಜು ಕುಲಕರ್ಣಿ ಅವರು ತಮ್ಮ ನಿವೇಶನದಲ್ಲಿನ ಶೆಡ್ನ್ನು ತಾತ್ಕಾಲಿಕವಾಗಿ ನೀಡಿದ್ದಾರೆ. ಪೌರಕಾರ್ಮಿಕರಾಗಿರುವ ಕಲಾವತಿ ಕಟ್ಟಿಮನಿ ಮತ್ತು ವಿಜಯಲಕ್ಷ್ಮಿ ಸಾಕೆನ್ನವರ ಅವರು ಮೂರು ದಿನಗಳಲ್ಲಿ ಬಿಡುವಿನ ವೇಳೆಯಲ್ಲಿ 17 ಪೊರಕೆಗಳನ್ನು ಸಿದ್ಧಪಡಿಸಿದ್ದಾರೆ. ಕಡ್ಡಿ ಹೊರತುಪಡಿಸಿ, ಉಳಿದ ಗರಿ ಮತ್ತು ಪಿಂಟೆಗಳನ್ನು ಗೊಬ್ಬರ ತಯಾರಿಕೆಗೆ ಡಾ. ಕುಲಕರ್ಣಿ ಅವರು ನಿರ್ಮಿಸಿರುವ ಕಾಂಪೋಸ್ಟ್ ಘಟಕಕ್ಕೆ ನೀಡುತ್ತಾರೆ.

‘ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತೆಂಗಿನ ಗರಿಗಳು ಸಿಗುತ್ತಿವೆ. ಅವುಗಳನ್ನು ಸಾಗಿಸಲು ಮತ್ತು ತ್ಯಾಜ್ಯ ಘಟಕಗಳಲ್ಲಿ ಶೇಖರಿಸಿಡಲು (ಡಿ–ಕಾಂಪೋಸ್ಟ್) ಕಷ್ಟವಾಗುತ್ತಿತ್ತು. ಉತ್ತಮ ಗರಿಗಳನ್ನು ಬಳಸಿ ಪೊರಕೆ ಸಿದ್ಧಪಡಿಸುವ ಬಗ್ಗೆ ಪಾಲಿಕೆಯ ಪರಿಸರ ಮತ್ತು ಸಮುದಾಯ ಸಂಘಟನೆ ವಿಭಾಗದ ಜೊತೆ ಚರ್ಚಿಸಿದೆವು. ಯೋಜನೆ ಕಾರ್ಯರೂಪಕ್ಕೆ ಬಂತು’ ಎಂದು ಘನ ತ್ಯಾಜ್ಯ ವಿಲೇವಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳಿ ತಿಳಿಸಿದರು.

‘ಜನರು ತೆಂಗಿನ ಗರಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗದೇ ರಸ್ತೆ ಬದಿ ಬಿಸಾಡುವರು. ಬಹುತೇಕ ಸಂದರ್ಭಗಳಲ್ಲಿ ಅವುಗಳನ್ನು ಕಸ ಸಂಗ್ರಹ ವಾಹನಗಳು ಒಯ್ಯುವುದಿಲ್ಲ. ಅದಕ್ಕೆ ವಾರ್ಡ್ಗೆ ನೇಮಕವಾಗಿರುವ ಜಮಾದಾರರು ಅಥವಾ ಪೌರಕಾರ್ಮಿಕರು ತೆಂಗಿನ ಗರಿಗಳನ್ನು ಕಂಡರೆ, ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡುತ್ತಾರೆ. ಪಾಲಿಕೆ ವಾಹನದಲ್ಲಿ ಅವುಗಳನ್ನು ಸಂಗ್ರಹಿಸಿ ತರುತ್ತೇವೆ. ನಲ್ಮ್ ಯೋಜನೆಯಡಿ ಸ್ವ–ಸಹಾಯ ಸಂಘದ ಸದಸ್ಯರಿಗೆ ಪೊರಕೆ ತಯಾರಿಕೆಯ ತರಬೇತಿ ನೀಡುವ ಯೋಜನೆಯಿದೆ’ ಎಂದು ಪರಿಸರ ಎಂಜಿನಿಯರ್ ಮತ್ತು ಸಮುದಾಯ ಸಂಘಟನಾ ಅಧಿಕಾರಿ ಸರೋಜಾ ಪೂಜಾರ ವಿವರಿಸಿದರು.

ತೆಂಗಿನ ಗರಿಗಳನ್ನು ತ್ಯಾಜ್ಯ ಘಟಕಕ್ಕೆ ಸಾಗಿಸಿ ಡಿ–ಕಾಂಪೋಸ್ಟ್ ಮಾಡುವುದು ಕಷ್ಟ. ಅವುಗಳನ್ನು ಸದ್ಬಳಕೆ ಮಾಡಿ ಪೊರಕೆಗಳನ್ನು ಸಿದ್ಧಪಡಿಸಲಾಗುತ್ತದೆ.
ರುದ್ರೇಶ ಘಾಳಿ ಪಾಲಿಕೆ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

‘ಸ್ವಸಹಾಯ ಸಂಘಗಳಿಗೆ ತೆಂಗಿನ ಗರಿ ಪೂರೈಕೆ’

‘ಅವಳಿನಗರ ಸ್ವಚ್ಛತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಹೊರಗುತ್ತಿಗೆಯಿಂದ ಅಥವಾ ಮಾರುಕಟ್ಟೆಯಿಂದ 300 ಅಥವಾ 400 ತೆಂಗಿನ ಗರಿಯ ಪೊರಕೆಯನ್ನು ಖರೀದಿಸುತ್ತೇವೆ. ಮಾರುಕಟ್ಟೆಯಲ್ಲಿ ಪೊರಕೆ ದರ ₹150 ರಿಂದ ₹170 ಇದೆ. ನಲ್ಮ್ ಯೋಜನೆಯಡಿ ಆಸಕ್ತ ಸ್ವ–ಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡುತ್ತೇವೆ. ನಂತರ ಅವರ ಮನೆಗಳಿಗೆ ತೆಂಗಿನ ಗರಿಗಳನ್ನು ಪೂರೈಸುತ್ತೇವೆ. ಕನಿಷ್ಠ ₹80 ರಿಂದ ₹100ಕ್ಕೆ ಪೊರಕೆ ಖರೀದಿಸಿ ಪಾಲಿಕೆಗೆ ನೀಡುತ್ತೇವೆ. ಬಡವರು ಉದ್ಯೋಗದ ಅಗತ್ಯವಿದ್ದವರು ಆಸಕ್ತ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಪರಿಸರ ಎಂಜಿನಿಯರ್ ಸರೋಜಾ ಪೂಜಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.