ಹುಬ್ಬಳ್ಳಿ: ಸೆಕೆಂಡ್ ಹ್ಯಾಂಡ್ ಬೈಕ್ಗಳ ಮಾರಾಟಕ್ಕೆ ಹೆಸರಾದ ಡಾಕಪ್ಪ ಸರ್ಕಲ್ ಮತ್ತು ವಿವಿಧ ಮಾರುಕಟ್ಟೆ ಪ್ರದೇಶಗಳನ್ನು ಒಳಗೊಂಡ ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆಯ 66ನೇ ವಾರ್ಡ್ನಲ್ಲಿ ಬಹುತೇಕ ಕಡೆ ಕಿರಿದಾದ ರಸ್ತೆಗಳಿವೆ.

ಮಾರುಕಟ್ಟೆ ಪ್ರದೇಶವಾದ್ದರಿಂದ ಸದಾ ವಾಹನ, ಜನ ದಟ್ಟಣೆ ಇರುತ್ತದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯೇ ಸಾರ್ವಜನಿಕರು ವಾಹನ ನಿಲುಗಡೆ ಮಾಡುವುದು ಸಾಮಾನ್ಯ.

ವಾರ್ಡ್ನ ಶೇ 65ರಷ್ಟು ಭಾಗದಲ್ಲಿ 24X7 ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇನ್ನುಳಿದ ಕಡೆ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ಓಣಿ, ಕಂಚಗಾರ ಗಲ್ಲಿ, ಕುಬಸದ ಗಲ್ಲಿಗಳಲ್ಲಿ ಸುಸಜ್ಜಿತ ರಸ್ತೆಗಳಿವೆ.

ನಾಲ್ಕು ಅಂಗನವಾಡಿ ಕೆಂದ್ರಗಳಿಗೂ ಸ್ವಂತ ಕಟ್ಟಡಗಳಿಲ್ಲ. ಉದ್ಯಾನಗಳೂ ಇಲ್ಲ. ಶೇ 75ರಷ್ಟು ಭಾಗದಲ್ಲಿ ರಸ್ತೆ, ಚರಂಡಿ ಕಾಮಗಾರಿ ಮಾಡಲಾಗಿದೆ. ಚಿತ್ರಗಾರ ಓಣಿ, ಬಟರ್ ಮಾರ್ಕೆಟ್, ಕಮಡೊಳ್ಳಿ ಓಣಿಗಳಲ್ಲಿ ರಸ್ತೆ ಕಾಮಗಾರಿ ಆಗಬೇಕಿದೆ.

‘ಉಳ್ಳಾಗಡ್ಡಿ ಓಣಿ, ಕಲಾದಗಿ ಓಣಿ ಮತ್ತು ನಾಷ್ಟಾ ಗಲ್ಲಿಯಲ್ಲಿ ₹82 ಲಕ್ಷ ಅನುದಾನದಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. 15ನೇ ಹಣಕಾಸು ಯೋಜನೆಯಲ್ಲಿ ಚಿತ್ರಗಾರ ಓಣಿಯಲ್ಲಿ ತೆರೆದ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ವಾರ್ಡ್ ಸದಸ್ಯೆ ಪ್ರೀತಿ ಖೋಡೆ ಹೇಳಿದರು.

‘ವಾರ್ಡ್ನಲ್ಲಿ ಎಲ್ಲ ಕಡೆ ಭೂಗತ (ಯುಜಿ) ಕೇಬಲ್ ಅಳವಡಿಸಲಾಗುವುದು. 12 ಕಡೆ ಬ್ಲಾಕ್ ಸ್ಪಾಟ್ಗಳಿದ್ದವು. ಅವುಗಳನ್ನು ನಿರ್ಮೂಲನೆ ಮಾಡಲಾಗಿದ್ದು, ಒಂದು ಮಾತ್ರ ಉಳಿದಿದೆ’ ಎಂದರು.

ವಾರ್ಡ್ನಲ್ಲಿ ಕೆಲವೆಡೆ ರಸ್ತೆಗಿಂತ ಒಂದೂವರೆ ಅಡಿಯಷ್ಟು ಕೆಳಭಾಗದಲ್ಲಿ ಚರಂಡಿ ಇದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಎಲ್ಲ ಕಡೆ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಬೇಕು. ಬಟರ್ ಮಾರ್ಕೆಟ್ನಲ್ಲಿ ವಿವಿಧ ಕಾಮಗಾರಿಗಳಿಗಾಗಿ ರಸ್ತೆ ಅಗೆದಿದ್ದು, ದುರಸ್ತಿ ಮಾಡಬೇಕು ಎಂಬುದು ನಿವಾಸಿಗಳ ಆಗ್ರಹ.

ಎಂಜಿಎನ್ವಿವೈ ಯೋಜನೆಯ ₹1.50 ಕೋಟಿ ಅನುದಾನದಲ್ಲಿ ಡಾಕಪ್ಪ ಸರ್ಕಲ್ನಲ್ಲಿ ರಸ್ತೆ ತೆರೆದ ಚರಂಡಿ ಹೈಮಾಸ್ಟ್ ದೀಪ ಅಳವಡಿಕೆ ಸೇರಿ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.

- ಪ್ರೀತಿ ಖೋಡೆ ಸದಸ್ಯೆ ವಾರ್ಡ್ ಸಂಖ್ಯೆ 66 ಪ್ರೀತಿ ಖೋಡೆ ಸದಸ್ಯೆ ವಾರ್ಡ್ 66

ಡಾಕಪ್ಪ ಸರ್ಕಲ್ನಲ್ಲಿ ವಾಹನ ದಟ್ಟಣೆಗೆ ನಿವಾರಿಸಬೇಕು. ಚರಂಡಿಯಲ್ಲಿ ಹೂಳು ತೆಗೆಯುವ ಜತೆಗೆ ವಾರ್ಡ್ನಲ್ಲಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಪ್ರ

-ಕಾಶ್ ಡಾಕಪ್ಪ ಸರ್ಕಲ್

ವಾರ್ಡ್ ಮಾಹಿತಿ ವಾರ್ಡ್ ಸಂಖ್ಯೆ;66 ಮಹಾನಗರ ಪಾಲಿಕೆ ಸದಸ್ಯೆ;ಪ್ರೀತಿ ಖೋಡೆ ಮೊ.ಸಂ;9886189931 ಜನಸಂಖ್ಯೆ;11273 ವಿದ್ಯುತ್ ಕಂಬ;376 ಬೀದಿ ದೀಪ;376 ಅಂಗನವಾಡಿಗಳು;4 ಪ್ರಾಥಮಿಕ ಶಾಲೆ;4 ಪ್ರೌಢಶಾಲೆ;1 ಪ್ರಮುಖ ದೇವಸ್ಥಾನಗಳು: ಡಾಕಪ್ಪ ಸರ್ಕಲ್ನ ಹನುಮಾನ್ ದೇವಸ್ಥಾನ ಕಾಳಮ್ಮನ ಅಗಸಿಯಲ್ಲಿ ಕಾಳಿಕಾದೇವಿ ದೇವಸ್ಥಾನ ದುರ್ಗದ ಬೈಲ್ ಸರ್ಕಲ್ನ ದತ್ತ ಮಂದಿರ ತಿಮ್ಮಸಾಗರ ಓಣಿಯ ಸಿದ್ಧಲಿಂಗೇಶ್ವರ ದೇವಸ್ಥಾನ ಅರಳಿಕಟ್ಟಿ ಓಣಿಯಲ್ಲಿ ಶ್ರೀರಾಮ ಮಂದಿರ. ಪ್ರಮುಖ ಬಡಾವಣೆಗಳು; ದಿವಟೆ ಓಣಿ ಕಮರಿಪೇಟೆ ಅರಳಿಕಟ್ಟಿ ಓಣಿ ಬಮ್ಮಾಪುರ ಕುಂಬಾರ ಓಣಿ ಬ್ಯಾಣಿ ಓಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.