ಶುಕ್ರವಾರ, ಮಾರ್ಚ್ 24, 2023
22 °C

ಮತಪಟ್ಟಿಯಲ್ಲಿ ಗೊಂದಲ ಇರುವುದು ನಿಜ, ಇದಕ್ಕೆ ಬಿಜೆಪಿ ಕಾರಣವಲ್ಲ: ಸವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಗೊಂದಲಗಳು ಇರುವುದು ನಿಜ. ಆದರೆ ಇದಕ್ಕೆ ನಾವು ಕಾರಣವಲ್ಲ ಎಂದು 46ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ವೀರಣ್ಣ ಸವಡಿ ಹೇಳಿದರು.

ಮತಗಟ್ಟೆ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು 'ಒಂದೇ ಮನೆ ಸದಸ್ಯರದ್ದು ಬೇರೆ ಬೇರೆ ವಾರ್ಡ್‌ಗಳಲ್ಲಿ ಮತದಾನದ ಹಕ್ಕು‌ಬಂದಿದೆ. ಮತದಾನಕ್ಕಾಗಿ ಬೇರೆ ಬೇರೆ ಕೇಂದ್ರಗಳಿಗೆ ಅಲೆದಾಡಬೇಕಾಗುತ್ತಿದೆ' ಎಂದು ದೂರಿದರು.

ಮತದಾರರ ‌ಪಟ್ಟಿ ಪರಿಷ್ಕರಣೆಯನ್ನು ಅಧಿಕಾರಿಗಳು ಆಯಾ ಬಡಾವಣೆಗಳಿಗೆ ಹೋಗಿ‌ ಮಾಡಿಲ್ಲ. ಕಚೇರಿಯಲ್ಲಿದ್ದುಕೊಂಡೇ ಪಟ್ಟಿ ತಯಾರಿಸಿದ್ದಾರೆ. ಹೀಗಾಗಿ ಮೃತಪಟ್ಟವರ ಹೆಸರುಗಳು ಸಹ ಈಗಲೂ ಪಟ್ಟಿಯಲ್ಲಿ ಉಳಿದುಕೊಂಡಿವೆ. ಇದಕ್ಕೆ ಅಧಿಕಾರಿಗಳ ಲೋಪ ಕಾರಣ ಎಂದರು.

ದತ್ತಿ ರೋಟರಿ ಕಿವುಡ‌ ಮಕ್ಕಳ ಶಾಲೆಯಲ್ಲಿ  ಮತದಾನ ಮಾಡಿದ ರಾಘವೇಂದ್ರ ಗುತ್ತಲ ಎಂಬುವರು ನಮ್ಮ ಮನೆಯ ಸದಸ್ಯರದ್ದು ಬೇರೆ ಬೇರೆ ವಾರ್ಡ್‌ಗಳಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ನನ್ನ ಮಗಳಿಗೆ ಕಾಲಿಲ್ಲ. ಮತಗಟ್ಟೆ ಕೇಂದ್ರಗಳಿಗೆ ಪದೇ ಪದೇ ಅಲೆದಾಡುವುದೇ ಕೆಲಸವಾದರೆ ಮಗಳನ್ನು ಹಕ್ಕು ಚಲಾಯಿಸಲು ಹೇಗೆ ಕರೆದುಕೊಂಡು ‌ಹೋಗಬೇಕು ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು