ಹುಬ್ಬಳ್ಳಿ: ಧಾರವಾಡ ನಗರ, ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ಭಾಗಗಳಲ್ಲಿ ಆಗಾಗ ಬೆಂಕಿ ಅವಘಡ ಸಂಭವಿಸುತ್ತವೆ. ಆದರೆ, ಅದನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಅಗ್ನಿಶಾಮಕ ಠಾಣೆಗಳಲ್ಲಿ ಸಿಬ್ಬಂದಿ ಮತ್ತು ವಾಹನಗಳ ಕೊರತೆ ಇದೆ.

ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಅಗ್ನಿಶಾಮಕ ಠಾಣೆ ಇರಬೇಕು. ಆದರೆ, ಎಲ್ಲ ತಾಲ್ಲೂಕುಗಳಲ್ಲಿ ಠಾಣೆಗಳಿಲ್ಲ. ಕೈಗಾರಿಕಾ ಪ್ರದೇಶಗಳಲ್ಲೂ ಠಾಣೆ ಆರಂಭಕ್ಕೆ ಬೇಡಿಕೆ ಹೆಚ್ಚಾಗಿದೆ. ಶಾಶ್ವತ ಕಟ್ಟಡ, ಮೂಲಸೌಲಭ್ಯಗಳು ಮತ್ತು ಇನ್ನಿತರ ವ್ಯವಸ್ಥೆಯೂ ಆಗಬೇಕಿದೆ. ಜಿಲ್ಲೆಯ ಅಗ್ನಿಶಾಮಕ ದಳದಲ್ಲಿ ಒಟ್ಟು 233 ಹುದ್ದೆಗಳಿವೆ. ಅವುಗಳಲ್ಲಿ 211 ಭರ್ತಿಯಾಗಿದ್ದು, 22 ಹುದ್ದೆಗಳು ಖಾಲಿ ಇವೆ.

ಸದ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಮೂವರು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, 7 ಜನ ಅಗ್ನಿಶಾಮಕ ಠಾಣಾಧಿಕಾರಿ, 12 ಜನ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, 37 ಜನ ಪ್ರಮುಖ ಅಗ್ನಿಶಾಮಕ, 6 ಜನ ಚಾಲಕ ತಂತ್ರಜ್ಞರು, 41 ಜನ ಅಗ್ನಿಶಾಮಕ ಚಾಲಕರು ಮತ್ತು 127 ಜನ ಅಗ್ನಿಶಾಮಕರು ಇದ್ದಾರೆ.

‘15 ವರ್ಷ ಪೂರೈಸಿದ ವಾಹನಗಳನ್ನು ಮುಂದಿನ 3 ವರ್ಷಗಳವರೆಗೆ ಬಳಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಧಾರವಾಡ ಅಗ್ನಿಶಾಮಕ ಠಾಣೆಯಲ್ಲಿರುವ 2 ವಾಹನಗಳಿಗೆ ಮುಂಬರುವ ಏಪ್ರಿಲ್ಗೆ 15 ವರ್ಷ ಆಗಲಿದೆ. ಅಮರಗೋಳ ಠಾಣೆಯಲ್ಲಿರುವ ಒಂದು ವಾಹನಕ್ಕೆ 15 ವರ್ಷ ಆದಾಗ ಎರಡು ವರ್ಷಗಳ ಹಿಂದೆಯೇ ಅವಧಿ ವಿಸ್ತರಣೆಗೆ ಕೋರಲಾಗಿತ್ತು. ಅದಕ್ಕೂ ಅನುಮತಿ ಸಿಕ್ಕಿತು. ಆ ವಾಹನಕ್ಕೆ ಏಪ್ರಿಲ್ಗೆ 18 ವರ್ಷ ಆಗಲಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು.

ನಗರ ಭಾಗಗಳಲ್ಲೇ ಹೆಚ್ಚು ಅಗ್ನಿ ದುರಂತ: ಕಳೆದ ಎರಡು ವರ್ಷಗಳಲ್ಲಿ ಧಾರವಾಡ ನಗರ ಮತ್ತು ಗ್ರಾಮೀಣ ಭಾಗ ಮತ್ತು ಹುಬ್ಬಳ್ಳಿ ನಗರ ಭಾಗಗಳಲ್ಲೇ ಅತೀ ಹೆಚ್ಚು ಅಗ್ನಿ ದುರಂತಗಳು ನಡೆದಿವೆ. ಒಟ್ಟು 802 ಅಗ್ನಿ ದುರಂತದ ಕರೆಗಳು ಬಂದಿದ್ದು, ₹13.61 ಕೋಟಿ ಮೊತ್ತದ ಸಂಪತ್ತು ನಷ್ಟವಾಗಿದ್ದು, ₹127.88 ಕೋಟಿ ಮೊತ್ತದ ಸಂಪತ್ತನ್ನು ರಕ್ಷಣೆ ಮಾಡಲಾಗಿದೆ.

ನೀರು ಸಂಗ್ರಹ: ‘ತುರ್ತು ಪರಿಸ್ಥಿತಿಯಲ್ಲಿ ಠಾಣೆಯ ಆವರಣದಲ್ಲಿನ ತಳಮಟ್ಟದ ನೀರಿನ ಟ್ಯಾಂಕ್ ಹಾಗೂ ಸ್ಥಳೀಯ ಜಲ ಮೂಲಗಳಿಂದ ನೀರು ಸಂಗ್ರಹ ಮಾಡುತ್ತೇವೆ. ಧಾರವಾಡದ ಕಾರ್ಪೋರೇಷನ್ ಪಂಪ್ಹೌಸ್, ಅಗ್ನಿಶಾಮಕ ಠಾಣೆ ಆವರಣದಲ್ಲಿನ ತಳಮಟ್ಟದ ನೀರಿನ ಟ್ಯಾಂಕ್, ಹುಬ್ಬಳ್ಳಿಯ ಅಮರಗೋಳದ ಕಾರ್ಪೋರೇಷನ್ ಪಂಪ್ಹೌಸ್, ಹುಬ್ಬಳ್ಳಿ ನಗರದಲ್ಲಿನ ಆನಂದ ಜಿನ್ನಿಂಗ್ ಮಿಲ್ನ ಕಾರ್ಪೋರೇಟ್ ಪಂಪ್ಹೌಸ್, ಕಲಘಟಗಿಯಲ್ಲಿ ದಸ್ತಕೊಪ್ಪ ಕೆರೆ, ಅಣ್ಣಿಗೇರಿಯಲ್ಲಿ ಅಗ್ನಿಶಾಮಕ ಠಾಣೆ ಆವರಣದಲ್ಲಿನ ತಳಮಟ್ಟದ ನೀರಿನ ಟ್ಯಾಂಕ್ ಮೂಲಕ ನೀರು ಸಂಗ್ರಹಿಸಲಾಗುತ್ತದೆ’ ಎಂದು ಧಾರವಾಡ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗೋವಿಂದಪ್ಪ ಸುರನಗಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಠಾಣೆ ಆರಂಭಕ್ಕೆ ಜಾಗದ ಕೊರತೆ: ‘ಹುಬ್ಬಳ್ಳಿ ವ್ಯಾಪ್ತಿಯ ತಾರಿಹಾಳದಲ್ಲಿ ಕೈಗಾರಿಕಾ ಪ್ರದೇಶ ಹೆಚ್ಚಾಗಿರುವುದರಿಂದ ಅಗ್ನಿಶಾಮಕ ಠಾಣೆ ಆರಂಭಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯ ನವಲಗುಂದ ತಾಲ್ಲೂಕಿನಲ್ಲಿ ಠಾಣೆ ಆರಂಭಿಸಬೇಕಿದ್ದು, ಎಪಿಎಂಸಿಯಿಂದ ಅರ್ಧ ಎಕರೆ ಜಾಗ ಕೊಡಲು ಮುಂದಾಗಿದ್ದಾರೆ. ಆದರೆ ಎರಡು ಎಕರೆ ಸರ್ಕಾರಿ ಜಾಗದ ಅಗತ್ಯವಿದೆ. ಜಾಗ ಲಭ್ಯವಿಲ್ಲದ ಕಾರಣ ಶಾಸಕರ ಗಮನಕ್ಕೆ ತರಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಯಂ ಕಟ್ಟಡವಿಲ್ಲ: ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಮಾಧ್ಯಮ ಶಾಲೆಯ ಬಳಿ ಹುಬ್ಬಳ್ಳಿ ನಗರದ ಅಗ್ನಿಶಾಮಕ ಠಾಣೆ ಇದ್ದು, ಹು–ಧಾ ಮಹಾನಗರ ಪಾಲಿಕೆಯಿಂದ ತಾತ್ಕಾಲಿಕವಾಗಿ ಜಾಗ ನೀಡಲಾಗಿದೆ. ಕಾಯಂ ಕಟ್ಟಡವಿಲ್ಲ. ಇಲ್ಲಿ ಅಂದಾಜು 42 ಜನ ಸಿಬ್ಬಂದಿಯಿದ್ದು, ಅವರ ವಸತಿಗೆ ಉತ್ತಮ ವ್ಯವಸ್ಥೆಯಿಲ್ಲ. ಹಾಗಾಗಿ ಕುಸುಗಲ್ ರಸ್ತೆ ಬಳಿ ಠಾಣೆ ಆರಂಭಿಸಲು ಅರ್ಧ ಎಕರೆ ಜಾಗ ಗುರುತು ಮಾಡಲಾಗಿದೆ. ಆದರೆ ಪ್ರಕ್ರಿಯೆಗಳಿನ್ನೂ ಅಂತಿಮವಾಗಿಲ್ಲ.

ಪೂರಕ ಮಾಹಿತಿ: ಬಸವರಾಜ ಎಂ. ಗುಡ್ಡದಕೇರಿ, ಕಲ್ಲಪ್ಪ ಮ. ಮಿರ್ಜಿ

2021ರಿಂದ 2025ರ ಡಿಸೆಂಬರ್ ತಿಂಗಳ ಕೊನೆಯವರೆಗೆ ಒಟ್ಟು ₹483 ಕೋಟಿ ಮೊತ್ತದ ಸಂಪತ್ತು ರಕ್ಷಣೆಯಾಗಿದ್ದು ಅಗ್ನಿ ಅವಘಡಗಳಲ್ಲಿ ಒಟ್ಟು ₹658 ಕೋಟಿ ಮೊತ್ತದ ಸಂಪತ್ತು ನಷ್ಟವಾಗಿದೆ.
ಗೋವಿಂದಪ್ಪ ಸುರನಗಟ್ಟಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಧಾರವಾಡ

‘ಇನ್ನೆರೆಡು ವಾಹನ ಅಗತ್ಯ’

‘ಕುಂದಗೋಳದ ಅಗ್ನಿಶಾಮಕ ದಳದಲ್ಲಿ 20 ಜನ ಸಿಬ್ಬಂದಿ ಇದ್ದಾರೆ. ಒಟ್ಟು ಮೂರು ವಾಹನಗಳಿದ್ದು ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇನ್ನೆರಡೂ 15 ವರ್ಷ ಮೇಲ್ಪಟ್ಟಿದ್ದರಿಂದ ಸರ್ಕಾರಿ ಆದೇಶದಂತೆ ಕಾರ್ಯ ಸ್ಥಗಿತಗೊಳಿಸಲಾಗಿದೆ. ಇನ್ನೆರಡು ವಾಹನಗಳ ಅಗತ್ಯವಿದೆ’ ಎಂದು ಮೂಲಗಳು ತಿಳಿಸಿವೆ. ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಈಚೆಗೆ 3 ಮೇವಿನ ಬಣವೆಗಳಿಗೆ ಬೆಂಕಿ ತಗುಲಿತ್ತು. ಅಂದಾಜು ₹50 ಸಾವಿರ ಮೌಲ್ಯದ ಹೊಟ್ಟಿನ ಬಣವೆಗೆ ಬೆಂಕಿ ತಗುಲಿತ್ತು. ₹30 ಸಾವಿರ ಮೌಲ್ಯದ ಬಣವೆಯನ್ನು ಉಳಿಸಲಾಗಿದೆ.

ಅಗ್ನಿ ದುರಂತ ಅಧಿಕ: ವಾಹನ ಕೊರತೆ

ಕಲಘಟಗಿ ತಾಲ್ಲೂಕಿನ ಜಿನ್ನೂರ ಹಿಂಡಸಗೇರಿ ಗಲಗಿನಗಟ್ಟಿ ಹಾಗೂ ವಿವಿಧ ಗ್ರಾಮಗಳಲ್ಲಿ ಸುಮಾರು 80 ರಿಂದ 90 ಎಕರೆಯಷ್ಟು ರೈತರ ಜಮೀನಿನಲ್ಲಿ ಬೆಳೆದ ಕಬ್ಬು ಈಚೆಗೆ ಸುಟ್ಟು ಅಪಾರ ಹಾನಿ ಸಂಭವಿಸಿದೆ. ತಾಲ್ಲೂಕಿನಲ್ಲಿ 87 ಗ್ರಾಮಗಳು ಇದ್ದು ಅಗ್ನಿ ನಂದಿಸಲು ಒಂದೇ ವಾಹನ ಇರುವುದರಿಂದ ದುರಂತವಾದಾಗ ಒಂದು ಕಡೆ ತೆರಳಿದಾಗ ಬೇರೆ ಕಡೆಯೂ ಘಟನೆ ನಡೆದಾಗ ವಾಹನ ಇಲ್ಲದಂತಾಗಿದೆ. ಇದರಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಠಾಣೆಗೆ ಮೊದಲು ಎರಡು ವಾಹನಗಳಿದ್ದವು ಅದರಲ್ಲಿ ಒಂದು ವಾಹನ 15 ವರ್ಷವಾಗಿದ್ದರಿಂದ ಬಳಕೆ ಮಾಡುತ್ತಿಲ್ಲ. ಇನ್ನೊಂದು ಅಗ್ನಿ ಶಾಮಕ ವಾಹನದ ಅಗತ್ಯವಿದೆ ಎಂದು ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೆ ತರಲಾಗಿದೆ’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಅರುಣ್ ಮಾಳ್ವಾದೆ ತಿಳಿಸಿದರು.

ಶೇ 50ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ

ಜಿಲ್ಲೆಯಲ್ಲಿ ಸಿಬ್ಬಂದಿ ಕೊರೆತೆ ಹೆಚ್ಚಿದೆ. ಅಣ್ಣಿಗೇರಿ ಕಲಘಟಗಿ ಮತ್ತು ಕುಂದಗೋಳದಲ್ಲಿ ಶೇ 50ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದೆ. ಕಲಘಟಗಿ ಜಮೀನು ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಹೆಚ್ಚಾಗಿ ಹಾದು ಹೋಗಿದ್ದು ಕಬ್ಬಿನ ಗದ್ದೆಗೆ ಬೆಂಕಿ ಬೀಳುವ ಘಟನೆಗಳು ಹೆಚ್ಚಿವೆ. ಹುಬ್ಬಳ್ಳಿ ವಲಯ 42 ಠಾಣೆಗಳನ್ನು ಒಳಗೊಂಡಿದ್ದು ಪ್ರತಿ ಠಾಣೆಗೂ ಎರಡು ಅಗ್ನಿಶಾಮಕ ವಾಹನಗಳು ಬೇಕು. ಒಂದು ವಾಹನ ಘಟನೆ ನಡೆದ ಸ್ಥಳಕ್ಕೆ ಹೋದಾಗ ಇನ್ನೊಂದೆಡೆ ಅಗ್ನಿ ದುರಂತ ನಡೆದಾಗ ಕಳುಹಿಸಲು ವಾಹನ ಕೊರತೆ ಎದುರಾಗುತ್ತದೆ. ಹಾಗಾಗಿ 2 ವಾಹನಗಳು ಅತ್ಯಗತ್ಯ. 6 ವಾಹನಗಳು ಬೇಕು: ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ 6 ಅಗ್ನಿಶಾಮಕ ಠಾಣೆಗಳಿವೆ. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಹೊಸ ಸಾರಿಗೆ ನಿಯಮದಂತೆ 15 ವರ್ಷ ಪೂರೈಸಿದ ವಾಹನಗಳನ್ನು ಬಳಸುವಂತಿಲ್ಲ ಎಂಬ ಆದೇಶದನ್ವಯ 7 ವಾಹನಗಳು ಮೂಲೆಗುಂಪಾಗಿವೆ. ಸದ್ಯ 9 ಅಗ್ನಿಶಾಮಕ ವಾಹನಗಳಿದ್ದು ಕಾರ್ಯನಿರ್ವಹಣೆಗೆ ಇನ್ನೂ 6 ವಾಹನಗಳ ಅವಶ್ಯವಿದೆ.