ಹುಬ್ಬಳ್ಳಿ: ಕಾಲವೇ ಮೋಸಗಾರ ಸಿನಿಮಾ ಜೂನ್ 20ರಂದು ರಾಜ್ಯದಾದ್ಯಂತ 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಾಯಕ ನಟ ಭರತ್ ಸಾಗರ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಟುಂಬಿಕ ಕಥಾಹಂದರ ಇರುವ ಸಿನಿಮಾ ಇದಾಗಿದ್ದು, ಯಶಸ್ವಿನಿ ರವೀಂದ್ರ ಸಿನಿಮಾದ ನಾಯಕನಟಿಯಾಗಿ ಅಭಿನಯಿಸಿದ್ದಾರೆ ಎಂದರು.

ಸಂಜಯ್ ಪುರಾಣಿಕ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಜತ್ ಸಲಾಂಕ್ ನಿರ್ಮಾಪಕರಾಗಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕುರಿ ಪ್ರತಾಪ್, ವಿಜಯ್ ಚೆಂಡೂರ ಮುಂತಾದವರು ತಾರಾಂಗಣದಲ್ಲಿದ್ದಾರೆ ಎಂದು ಹೇಳಿದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಸಂಚಿತ್ ಹೆಗಡೆ, ಅನುರಾಧಾ ಭಟ್ ಹಾಡಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದು, ಐದು ಫೈಟ್ಗಳಿವೆ ಎಂದರು.

ಶಿವಾನಂದ ಮುತ್ತಣ್ಣವರ, ಡೇವಿಡ್, ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.