- ಬಸ್ ನಿಲ್ದಾಣ ರೈಲು ನಿಲ್ದಾಣ ಶಾಪಿಂಗ್ ಮಾಲ್‌ಗಳಲ್ಲಿ ಶೌಚಾಲಯ ಉಚಿತವಾಗಿರಬೇಕು. ಶೌಚಾಲಯದ ಹೆಸರಿನ ಮೇಲೆ ಹಣ ವಸೂಲಿ ಮಾಡುವುದು ಸರಿಯಲ್ಲ
ರಾಜು ಕೋನಾಪುರ ಇಂದಿರಾ ನಗರ
ಸ್ವಾತಂತ್ರ್ಯ ಬಂದು 80 ವರ್ಷ ಸಮೀಪಿಸುತ್ತಿದ್ದರೂ ಇನ್ನೂ ನಾವು ಶೌಚಾಲಯದ ವಿಷಯ ಕುರಿತು ಮಾತನಾಡುತ್ತಿರುವುದು ನಮ್ಮ ವ್ಯವಸ್ಥೆಯ ಲೋಪ. ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡಾ ನಮ್ಮ ಹಕ್ಕು
ಬಸನಗೌಡ ರಾಮನಗೌಡ್ರ ಪ್ರಯಾಣಿಕ
ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಣೆ ಮಾಡಲು ಸ್ಥಳೀಯ ಸಫಾಯಿ ಕರ್ಮಚಾರಿಗಳ ಸಂಘಕ್ಕೆ ವಹಿಸಬೇಕು. ಸರ್ಕಾರವೇ ಇಂತಿಷ್ಟು ಹಣವನ್ನು ನಿಗದಿ ಮಾಡಿದರೆ ನಾಗರಿಕರೂ ತೊಂದರೆಯಾಗುವುದಿಲ್ಲ
ವೆಂಕಟೇಶ ಸ್ವಚ್ಛತಾ ಕಾರ್ಮಿಕ
ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವಾರ ಟ್ಯಾಂಕರ್ ಮೂಲಕ ನೀರು ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಜನರು ಸಹಕರಿಸದೇ ಇರುವುದರಿಂದ ನಮಗೆ ಸವಾಲಾಗಿ ಪರಿಣಮಿಸಿದೆ