ಮಂಗಳವಾರ, ಜೂನ್ 15, 2021
26 °C

ಹುಬ್ಬಳ್ಳಿ–ಚಿತ್ರದುರ್ಗ ರೈಲು ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬ್ಯಾಡಗಿ ಹಾಗೂ ಹಾವೇರಿ ನಡುವೆ ರೈಲ್ವೆ ಸಂಬಂಧಿತ ತಾಂತ್ರಿಕ ಕಾರ್ಯ ನಡೆಯಲಿರುವ ಕಾರಣ ಮೇ 23ರಿಂದ 28ರ ವರೆಗೆ ಹುಬ್ಬಳ್ಳಿ–ಚಿತ್ರದುರ್ಗ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಯೆಸ್‌ ಚಂಡಮಾರುತದ ಆತಂಕ ಇರುವ ಕಾರಣ ಮೇ 25ರಿಂದ ಮುಂದಿನ ಆದೇಶದ ತನಕ ಹೌರಾ–ವಾಸ್ಕೋಡಗಾಮ ಅಮರಾವತಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಈ ರೈಲು ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್‌ರಾಕ್‌ ಮೂಲಕ ಸಂಚರಿಸುತ್ತಿತ್ತು.

ಮೇ 25ರಿಂದ ಗುವಾಹಟಿ–ಕಾಚಿಗೂಡ–ವಾಸ್ಕೋಡಗಾಮ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಗುವಾಹಟಿಯಿಂದ ರದ್ದುಪಡಿಸಲಾಗಿದೆ. ಈ ರೈಲು ಮಡಗಾಂವ್‌, ಕುಲೇಂ, ಕ್ಯಾಸಲ್‌ರಾಕ್‌, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ ಹಾಗೂ ಗುಂತಕಲ್‌ ಮಾರ್ಗದ ಮೂಲಕ ಸಂಚರಿಸುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು